ಬರ್ಮಿಂಗ್ಹ್ಯಾಮ್: ನಾಲ್ಕನೇ ಶ್ರೇಯಾಂಕದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಅವರು ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲೇ ಮಲೇಷ್ಯಾದ ಜೋಡಿ ಎದುರು ಸೋಲನುಭವಿಸಿದರು.

ಬುಧವಾರ ನಡೆದ ಈ ಪಂದ್ಯದಲ್ಲಿ ಮಲೇಷ್ಯಾದ ಆ್ಯರನ್ ತೈ ಹಾಗೂ ಖಾಯ್ ಷಿಂಗ್ ಕಾಂಗ್ ಜೋಡಿ 23–21, 21–12 ರಿಂದ ನೇರ ಗೇಮ್ಗಳಿಂದ ಭಾರತದ ಸಾತ್ವಿಕ್– ಚಿರಾಗ್ ಜೋಡಿಯನ್ನು 42 ನಿಮಿಷಗಳಲ್ಲಿ ಮಣಿಸಿತು.

ಭಾರತದ ಜೋಡಿ ಮೊದಲ ಗೇಮ್ಅನ್ನು ಉತ್ತಮ ರೀತಿಯಲ್ಲೇ ಆರಂಭಿಸಿತು. ಚುರುಕಿನ ಚಲನೆ, ಆಕ್ರಮಣಕಾರಿ ಆಟದಿಂದ 11–6 ಮುನ್ನಡೆ ಸಾಧಿಸಿತು. ಈ ವೇಳೆ ಮಲೇಷ್ಯಾ ಜೋಡಿ ರಕ್ಷಣಾತ್ಮಕ ಆಟಕ್ಕೇ ಮುಂದಾಗಬೇಕಾಯಿತು. ಆದರೆ ಆರನ್– ಖಾಯ್ ಜೋಡಿ ಛಲಬಿಡಲಿಲ್ಲ. ಕ್ರಮೇಣ ಈ ಅಂತರ ಕಡಿಮೆ ಮಾಡಿದರು. ಮೊದಲ ಸಲ 16–16 ರಲ್ಲಿ ಸಮಮಾಡಿಕೊಂಡಿತು. ತೀವ್ರ ಹೋರಾಟದ ಗೇಮ್ನ ನಿರ್ಣಾಯಕ ಹಂತದಲ್ಲಿ ಮುನ್ನಡೆ ಪಡೆದರು. 23–21ರಲ್ಲಿ ಗೇಮ್ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್ನಲ್ಲಿ ಮಲೇಷ್ಯಾದ ಆಟಗಾರರು ಹಿಡಿತ ಸಾಧಿಸಿದರು. 11–7ರಲ್ಲಿ ಮುನ್ನಡೆ ಸಾಧಿಸಿದ ಅವರು ಯಾವ ಹಂತದಲ್ಲೂ ಭಾರತದ ಅನುಭವಿ ಆಟಗಾರರಿಗೆ ಚೇತರಿಸಲು ಅವಕಾಶ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.