ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ 20 ವರ್ಷದೊಳಗಿನವರ ಕುಸ್ತಿ: ಅಮಿತ್ ವಿಶ್ವ ಚಾಂಪಿಯನ್‌

Published 16 ಆಗಸ್ಟ್ 2023, 16:37 IST
Last Updated 16 ಆಗಸ್ಟ್ 2023, 16:37 IST
ಅಕ್ಷರ ಗಾತ್ರ

ಅಮ್ಮಾನ್‌ (ಜೋರ್ಡಾನ್‌), (ಪಿಟಿಐ): ರಷ್ಯಾದ ಎಲ್ದರ್‌ ಅಖ್ಮಾದುನಿನೋವ್ ಅವರನ್ನು 61 ಕೆ.ಜಿ. ವಿಭಾಗದಲ್ಲಿ ಮಣಿಸಿದ ಅಮಿತ್‌ ಕುಮಾರ್‌ ಅವರು 2018ರ ನಂತರ ವಿಶ್ವ ಜೂನಿಯರ್ ಚಾಂಪಿಯನ್ ಆದ ಮೊದಲ ಭಾರತೀಯ ಕುಸ್ತಿಪಟು ಎನಿಸಿದರು.

ಬುಧವಾರ ನಡೆದ ಈ ಸೆಣಸಾಟದ ಒಂದು ಹಂತದಲ್ಲಿ ಅಮಿತ್‌ 0–6 ಹಿನ್ನಡೆಯಲ್ಲಿದ್ದರು. ಆದರೆ ಆರಂಭದ ವೇಗವನ್ನು ಕಳೆದುಕೊಂಡ ರಷ್ಯಾದ ಸ್ಪರ್ಧಿ ನಂತರ ಚೂರು ಬಳಲಿದಂತೆ ಕಂಡಿತು. ರಕ್ಷಣೆಯಲ್ಲಿ ಅವರ ಲೋಪಗಳ ಪೂರ್ಣಲಾಭ ಎತ್ತಿದ ಅಮಿತ್‌ ಸತತ 9 ಪಾಯಿಂಟ್‌ ಕಲೆಹಾಕಿ ವಿಜಯಿಯಾದರು. ವಿರಾಮದ ನಂತರವಂತೂ ಸೆಣಸಾಟ ಏಕಪಕ್ಷೀಯ ಆಯಿತು.

ಈಗ ಸೀನಿಯರ್‌ ವಿಭಾಗಕ್ಕೆ ಬಡ್ತಿ ಪಡೆದಿರುವ ದೀಪಕ್ ಪೂನಿಯಾ 2018ರಲ್ಲಿ ವಿಶ್ವ ಜೂನಿಯರ್ ಚಾಂಪಿಯನ್ ಆಗಿದ್ದರು.

ಇದೇ ವೇಳೆ ಮಹಿಳೆಯರ ವಿಭಾಗದಲ್ಲಿ ಪ್ರಿಯಾ ಅವರು 76 ಕೆ.ಜಿ. ವಿಭಾಗದಲ್ಲಿ ಫೈನಲ್‌ ತಲುಪಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ತಾಂತ್ರಿಕ ಕೌಶಲದ ಆಧಾರದ ಮೇಲೆ ಅಮೆರಿಕದ ಕೆನಡಿ ಅಲೆಕ್ಸಿಸ್‌ ಬ್ಲೇಡ್ಸ್ ಅವರನ್ನು ಸೋಲಿಸಿದರು. ಅವರು ಫೈನಲ್‌ನಲ್ಲಿ ಜರ್ಮನಿಯ ಲಾರಾ ಸೆಲಿನ್‌ ಕುಹೆನ್ ವಿರುದ್ಧ ಗುರುವಾರ ಹೋರಾಟ ನಡೆಸುವರು.

ಭಾರತದ ಅಂತಿಮ್ ಪಂಘಲ್ ಅವರು ಕಳೆದ ವರ್ಷ 53 ಕೆ.ಜಿ. ವಿಭಾಗದಲ್ಲಿ ವಿಶ್ವ ಚಾಂಪಿಯನ್‌ ಆದ ಮೊದಲ ಭಾರತೀಯ ಮಹಿಳೆ ಎನಿಸಿದ್ದರು.

ಜೈದೀಪ್‌ 74 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಅವರು ಇದಕ್ಕಾಗಿ ಕಿರ್ಗಿಸ್ತಾನದ ಝಕ್‌ಶಿಲಿಕ್ ರಸ್ಲೊನವಿಚ್ ಅವರನ್ನು ಸೋಲಿಸಿದರು. ಭಾರತದ ಫ್ರೀಸ್ಟೈಲ್ ಸ್ಪರ್ಧಿಗಳು ಇದುವರೆಗೆ ಐದು ಪದಕಗಳನ್ನು ಗೆದ್ದಂತಾಗಿದೆ. ಸಾಗರ್ ಜಗ್ಲಾನ್ (79ಕೆ.ಜಿ) ಬೆಳ್ಳಿಯ ಪದಕ, ದೀಪಕ್ ಚಾಹಲ್ (97 ಕೆ.ಜಿ) ಮತ್ತು ಸಾಗರ್ (57 ಕೆ.ಜಿ) ಮಂಗಳವಾರ ಕಂಚಿನ ಪದಕಗಳನ್ನು ಗಳಿಸಿದ್ದರು.

ರಜತ್‌ ರುಹಾಲ್ ಅವರು ಗುರುವಾರ 125 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಕೆನಡಾದ ಕರಣವೀರ್ ಸಿಂಗ್‌ ಮಹಿಲ್ ವಿರುದ್ಧ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT