ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೆನಿಸ್‌: ಕಾಶ್ವಿಗೆ ಅನ್ವಿ ಆಘಾತ

Published : 2 ಸೆಪ್ಟೆಂಬರ್ 2024, 14:14 IST
Last Updated : 2 ಸೆಪ್ಟೆಂಬರ್ 2024, 14:14 IST
ಫಾಲೋ ಮಾಡಿ
Comments

ಬೆಂಗಳೂರು: ಅನ್ವಿ ಪುನಗಂಟಿ ಸೋಮವಾರ ಇಲ್ಲಿ ನಡೆಯುತ್ತಿರುವ ಕೆಎಸ್‌ಎಲ್‌ಟಿಎ-ಐಟಿಎಫ್ ಜೆ30 ಟೂರ್ನಿಯ ಬಾಲಕಿಯರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ 7-6 (4), 6-4 ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಕಶ್ವಿ ಸುನಿಲ್ ಅವರಿಗೆ ಆಘಾತ ನೀಡಿದರು.

ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ತನುಷ್ ಘಿಲ್‌ದ್ಯಾಲ್ 6-3, 6-2ರಲ್ಲಿ ಅರ್ಜುನ್ ಓಜಾ ಅವರನ್ನು ಮಣಿಸಿದರೆ, ವಿಶಾಲ್ ವಾಸುದೇವ್ ಎಂ. 7-6(6), 6-2ರಲ್ಲಿ ಹರ್ ಅಬಿರ್ ಸೆಖೋನ್ ಅವರನ್ನು ಮಣಿಸಿದರು. ಮೂರನೇ ಶ್ರೇಯಾಂಕದ ಅಧಿರಾಜ್ ಠಾಕೂರ್ ಅವರು 6-4, 6-0 ರಲ್ಲಿ ತೇಜಸ್ ಅಹುಜಾ ವಿರುದ್ಧ ಗೆದ್ದರು. ಪ್ರಬೀರ್ ಮುಖೇಶ್ ಚಾವ್ಡಾ 6-2, 6-2 ರಲ್ಲಿ ಶ್ರೀವಂತ್ ರೆಡ್ಡಿ ಮುಮ್ಮಡಿ ವಿರುದ್ಧ ಜಯ ಸಾಧಿಸಿದರು.

ಐದನೇ ಶ್ರೇಯಾಂಕದ ಓಜಸ್ ಮೆಹ್ಲಾವತ್ ಅವರು 6-2, 4-6, 6-4ರಲ್ಲಿ ಶ್ರೀಕರ್ ಡೋನಿ ಅವರನ್ನು, ಅಕ್ಷತ್ ಧುಲ್ ಅವರು 6-4, 6-0 ರಿಂದ ಕಬೀರ್ ಚೋಥಾನಿ ಅವರನ್ನು ಸೋಲಿಸಿದರು. ಅಮಿತ್ ಮೂಂಡ್ ಅವರು 6-2, 6-2 ರಿಂದ ಅಹಿಲ್ ಅಯಾಜ್ ವಿರುದ್ಧ ಜಯ ಗಳಿಸಿದರು. ಮುಸ್ತಫಾ ರಾಜಾ ಪಂದ್ಯದ ಮಧ್ಯೆ ನಿವೃತ್ತರಾದ ಕಾರಣ ಆರವ್ ಚಾವ್ಲಾ ಮುಂದಿನ ಸುತ್ತು ಪ್ರವೇಶಿಸಿದರು.

ಬಾಲಕಿಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಶ್ರೀನಿಧಿ ಬಾಲಾಜಿ 6-1, 6-3ರಲ್ಲಿ ಶಾನ್ವಿತಾ ರೆಡ್ಡಿ ನೂಕಾಲಾ ವಿರುದ್ಧ ಮತ್ತು ಅಲೀನಾ ಫರೀದ್ 6-1, 6-1ರಲ್ಲಿ ಗುರ್ಲೀನ್ ಕೌರ್ ಖನುಜಾ ವಿರುದ್ಧ ಗೆದ್ದರು. ಅನನ್ಯಾ ಚೌಬೆ ಅವರು 6-2, 6-1ರಿಂದ ವೆನ್ನೆಲಾ ರೆಡ್ಡಿ ಗಾರುಗುಪಾಟಿ ಎದುರು ಜಯಗಳಿಸಿದರು. ಅಸ್ಮಿ ಅಡ್ಕರ್ ಅವರು 6-1, 6-0 ಸೆಟ್‌ಗಳಿಂದ ಪಾಲ್ ಉಪಾಧ್ಯಾಯ ಅವರನ್ನು ಸೋಲಿಸಿದರು. ಏಂಜಲ್ ಪಟೇಲ್ ಅವರು 2-6, 6-2, 6-4 ಸೆಟ್‌ಗಳಿಂದ ಅರ್ಜಾನ್ ಖೋರಕಿವಾಲಾ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT