ಶಾಂಘೈ (ಪಿಟಿಐ): ಪದಕದ ಭರವಸೆ ಯಾಗಿದ್ದ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು, ಆರ್ಚರಿ ವಿಶ್ವಕಪ್ ಸ್ಟೇಜ್ 2 ಟೂರ್ನಿಯ ಕಾಂಪೌಂಡ್ ವಿಭಾಗದಲ್ಲಿ ಬುಧವಾರ ನಿರಾಶೆ ಅನುಭವಿಸಬೇಕಾಯಿತು.

ನಿರ್ಣಾಯಕ ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾದ ಭಾರತದ ಬಿಲ್ಗಾರರು ಖಾಲಿಕೈಯಲ್ಲಿ ಮರಳಬೇಕಾಯಿತು. ಅತಿ ಹೆಚ್ಚಿನ ಆಘಾತ ಎದುರಾಗಿದ್ದು ಭಾರತ ಮಹಿಳಾ ತಂಡದಿಂದ. ಹೋದ ತಿಂಗಳು ಮೆಕ್ಸಿಕೊದಲ್ಲಿ ನಡೆದಿದ್ದ ವರ್ಷದ ಮೊದಲ ವಿಶ್ವಕಪ್ನಲ್ಲಿ ಈ ತಂಡ ಚಿನ್ನ ಗೆದ್ದಿದ್ದ ಕಾರಣ ಇಲ್ಲೂ ಪದಕದ ನಿರೀಕ್ಷೆ ಇಡಲಾಗಿತ್ತು.

ಜ್ಯೋತಿ ಸುರೇಖಾ ವೆನ್ನಂ, ಪ್ರಗತಿ ಮತ್ತು ಅದಿತಿ ಸ್ವಾಮಿ ಅವರಿದ್ದ ತಂಡ ಕ್ವಾರ್ಟರ್ಫೈನಲ್ನಲ್ಲಿ ಟರ್ಕಿ ತಂಡಕ್ಕೆ 227–233 ರಲ್ಲಿ ಮಣಿಯಿತು.

ಪುರುಷರ ತಂಡ (ಓಜಸ್ ದೇವತಳೆ, ಸಾಹಿಲ್ ಜಾಧವ್ ಮತ್ತು ಕುಶಲ್ ದಲಾಲ್) ಒಂದು ಹಂತ ಮುಂದೆ ಹೋದರೂ ಸೆಮಿಫೈನಲ್ನಲ್ಲಿ ಅಮೆರಿಕ ತಂಡಕ್ಕೆ 234–235 ರಲ್ಲಿ ಮಣಿಯಿತು.

ಕಂಚಿನ ಪದಕಕ್ಕೆ ನಡೆದ ಹಣಾಹಣಿ ಯಲ್ಲಿ ಭಾರತ ತಂಡವು ಶೂಟ್ ಆಫ್ನಲ್ಲಿ ಚೀನಾ ಎದುರು ಸೋಲನುಭವಿಸಿತು. ನಿಗದಿ ಸುತ್ತಿನಲ್ಲಿ ಸ್ಕೋರ್ 234–234ರಲ್ಲಿ ಸಮನಾಗಿತ್ತು. ಶೂಟ್ ಆಫ್ನಲ್ಲಿ ಚೀನಾ ಮೇಲುಗೈ ಸಾಧಿಸಿತು.

ವೈಯಕ್ತಿಕ ವಿಭಾಗ: ತಂಡ ವಿಭಾಗದಲ್ಲಿ ನಿರಾಸೆಯಾದರೂ, ವೈಯಕ್ತಿಕ ವಿಭಾಗದಲ್ಲಿ ಭಾರತದ ಕಾಂಪೌಂಡ್ ಬಿಲ್ಗಾರರು 32 ಸುತ್ತಿಗೆ ಮುನ್ನಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-991113121

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.