ಟೊರುನ್ (ಪೋಲೆಂಡ್): ಪೋಲ್ವಾಲ್ಟ್ ತಾರೆ ಅರ್ಮಾಂಡ್ ಡುಪ್ಲಾಂಟಿಸ್ ಅವರು ಇಲ್ಲಿ ನಡೆದ ವಿಶ್ವ ಒಳಾಂಗಣ ಚಾಂಪಿಯನ್ಷಿಪ್ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

ಸ್ವೀಡನ್ನ ಡುಪ್ಲಾಂಟಿಸ್ 6.25 ಮೀಟರ್ ಎತ್ತರ ಜಿಗಿದರು. ವರ್ಷದ ಹಿಂದೆ ನಾನ್ಜಿಂಗ್ನಲ್ಲಿ ತೋರಿದ್ದ ಸಾಧನೆಗಿಂತ 10 ಸೆಂಟಿಮೀಟರ್ ಎತ್ತರ ಜಿಗಿದು, ತನ್ನದೇ ದಾಖಲೆಯನ್ನು ಸುಧಾರಿಸಿಕೊಂಡರು. ಈ ಮೂಲಕ ವಿಶ್ವ ಒಳಾಂಗಣ ಚಾಂಪಿಯನ್ಷಿಪ್ನಲ್ಲಿ ಸತತ ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಡುಪ್ಲಾಂಟಿಸ್ ಕ್ರಮವಾಗಿ 6.10, 6.15 ಮತ್ತು 6.25 ಮೀಟರ್ ಎತ್ತರವನ್ನು ಯಶಸ್ವಿಯಾಗಿ ದಾಟಿದರು. ಗ್ರೀಸ್ನ ಎಮ್ಮಾನಾಯಿಲ್ ಕರಾಲಿಸ್ ಅವರು 6.15 ಮೀಟರ್ ಜಿಗಿದು ಸತತ ಎರಡನೇ ಬಾರಿ ಬೆಳ್ಳಿ ತಮ್ಮದಾಗಿಸಿಕೊಂಡರು.

ಡುಪ್ಲಾಂಟಿಸ್ ಅವರು ಮಾರ್ಚ್ 12ರಂದು ಮೊಂಡೋ ಕ್ಲಾಸಿಕ್ ಕೂಟದಲ್ಲಿ 6.31 ಮೀಟರ್ ಸಾಧನೆಯೊಂದಿಗೆ ವಿಶ್ವದಾಖಲೆ ನಿರ್ಮಿಸಿದ್ದರು. ಅದನ್ನು ಮುರಿಯುವ ಪ್ರಯತ್ನ (6.32 ಮೀ.) ಇಲ್ಲಿ ನಡೆಸಿದರು. ಆದರೆ, ಅದು ಸಾಧ್ಯವಾಗಲಿಲ್ಲ.

ಆಸ್ಟ್ರೇಲಿಯಾದ ಕುರ್ಟಿಸ್ ಮಾರ್ಸ್ಚಾಲ್ ವೈಯಕ್ತಿಕ ಅತ್ಯುತ್ತಮ 6 ಮೀಟರ್ ಸಾಧನೆಯೊಂದಿಗೆ ಮೂರನೇ ಸ್ಥಾನ ಪಡೆದರು. ಕೂಟದ ಇತಿಹಾಸದಲ್ಲಿ ಮೊದಲ ಬಾರಿಗೆ ಮೂರು ಸ್ಪರ್ಧಿಗಳು ಆರು ಮೀಟರ್ ಗಡಿ ದಾಟಿದರು.

ಸ್ವಿಟ್ಜರ್ಲೆಂಡ್ನ ಸೈಮನ್ ಎಹ್ಯಾಮರ್ ವಿಶ್ವದಾಖಲೆಯ ಪಾಯಿಂಟ್ಸ್ (6,670) ಗಳಿಸಿ ಹೆಪ್ಟಾಥ್ಲಾನ್ ಪ್ರಶಸ್ತಿ ಗೆದ್ದರು. 2012ರಲ್ಲಿ ಅಮೆರಿಕದ ಇಹ್ಯಾಮರ್ನ ಆಶ್ಟನ್ ಈಟನ್ (6645) ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.