ಉಲಾನ್ಬಾತರ್ (ಮಂಗೋಲಿಯಾ, ಪಿಟಿಐ): ಭಾರತದ ಉದಯೋನ್ಮುಖ ತಾರೆ ವಿಶ್ವನಾಥ್ ಸುರೇಶ್ ಅವರು ಶುಕ್ರವಾರ ಮುಕ್ತಾಯವಾದ ಏಷ್ಯಾ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಸ್ವರ್ಣ ಜಯಿಸಿದರು. ಅದರೊಂದಿಗೆ, ಭಾರತದ ಬಾಕ್ಸರ್ಗಳು 5 ಚಿನ್ನ ಸೇರಿ 16 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದರು.

ತಮಿಳುನಾಡಿನ ಪೆರಂಬೂರಿನ ವಿಶ್ವನಾಥ್ ಅವರು ಪುರುಷರ 50 ಕೆ.ಜಿ. ವಿಭಾಗದ ಚಿನ್ನದ ಪದಕದ ‘ಬೌಟ್’ನಲ್ಲಿ 5–0ಯಿಂದ ಸರ್ವಾನುಮತದ ತೀರ್ಪಿನಲ್ಲಿ ಜಪಾನ್ನ ದೈಚಿ ಇವಾಯಿ ಅವರನ್ನು ಸೋಲಿಸಿದರು.

ವಿಶ್ವನಾಥ್ ಅವರು ಮಾಜಿ ಬಾಕ್ಸರ್ ಸುರೇಶ್ ಬಾಬು ಅವರ ಪುತ್ರ. ಸದ್ಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಟೂರ್ನಿಯ ಎಂಟರ ಘಟ್ಟದಲ್ಲಿ 5–0ಯಿಂದ ವಿಶ್ವದ ಅಗ್ರಮಾನ್ಯ ಬಾಕ್ಸರ್, ಕಜಾಕಸ್ತಾನದ ಸಂಝಾರ್ ತಾಷ್ಕೆಂಬೆ ಅವರಿಗೆ ಆಘಾತ ನೀಡಿ, ಗಮನ ಸೆಳೆದಿದ್ದರು.

60 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದ ಸಚಿನ್ ಅವರು ಫೈನಲ್ನಲ್ಲಿ ಹೋರಾಟ ತೋರಿದರಾದರೂ 2–3ರಿಂದ ಕಜಾಕಸ್ತಾನದ ಒರಜ್ಬೆಕ್ ಅಸಿಲ್ಕುಲೊವ್ ವಿರುದ್ಧ ಪರಾಭವಗೊಂಡರು.

ಭಾರತವು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು. 6 ಚಿನ್ನ ಗೆದ್ದ ಕಜಾಕಸ್ತಾನ ಅಗ್ರಸ್ಥಾನ ಪಡೆದುಕೊಂಡಿತು. ಒಟ್ಟಾರೆ ಪದಕಗಳ ಸಂಖ್ಯೆಯಲ್ಲಿ ಭಾರತ (16) ಅಗ್ರಸ್ಥಾನಿಯಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-51-1795735919

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.