ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ: ಎಲ್ಲ 10 ವಿಭಾಗಗಳಲ್ಲಿ ಫೈನಲ್‌ಗೆ ಭಾರತ

Published 4 ಮೇ 2023, 12:55 IST
Last Updated 4 ಮೇ 2023, 12:55 IST
ಅಕ್ಷರ ಗಾತ್ರ

ತಾಷ್ಕೆಂಟ್‌, ಉಜ್ಬೆಕಿಸ್ತಾನ: ಏಷ್ಯಾಕಪ್ ಎರಡನೇ ಲೆಗ್ ವಿಶ್ವ ರ‍್ಯಾಂಕಿಂಗ್‌ ಆರ್ಚರಿಯಲ್ಲಿ ಭಾರತದ ಸ್ಪರ್ಧಿಗಳ ಪಾರಮ್ಯ ಮುಂದುವರಿದಿದ್ದು, ಎಲ್ಲ 10 ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದ್ದು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಗುರುವಾರ ನಡೆದ ರಿಕರ್ವ್‌ ಮತ್ತು ಕಾಂಪೌಂಡ್‌ ಮಿಶ್ರ ತಂಡ ವಿಭಾಗಗಳಲ್ಲಿ ಭಾರತದ ಸ್ಪರ್ಧಿಗಳು ಪ್ರಶಸ್ತಿ ಸುತ್ತು ತಲುಪಿದರು. ರಿಕರ್ವ್‌ ವಿಭಾಗದ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಜೋಡಿ ಮೃಣಾಲ್‌ ಚೌಹಾಣ್‌– ಸಂಗೀತಾ ಅವರು 6–0 ರಲ್ಲಿ (37-32, 34-33, 36-34) ಹಾಂಕಾಂಗ್‌ನ ಎದುರಾಳಿಗಳನ್ನು ಮಣಿಸಿದರು.

ಚಿನ್ನದ ಪದಕಕ್ಕಾಗಿ ಶುಕ್ರವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ, ಚೀನಾ ವಿರುದ್ಧ ಪೈಪೋಟಿ ನಡೆಸಲಿದೆ.

ಕಾಂಪೌಂಡ್‌ ಮಿಶ್ರ ವಿಭಾಗದ ನಾಲ್ಕರಘಟ್ಟದ ಹಣಾಹಣಿಯಲ್ಲಿ ಅಭಿಷೇಕ್‌ ವರ್ಮಾ– ಪರ್ಣೀತ್‌ ಕೌರ್‌ 152–151 ರಲ್ಲಿ ಇರಾಕ್‌ ತಂಡವನ್ನು ಸೋಲಿಸಿದರು.

ಅರ್ಹತಾ ಹಂತದಲ್ಲಿ ಅಗ್ರಸ್ಥಾನ ಪಡೆದಿದ್ದರಿಂದ ಭಾರತದ ಜೋಡಿಗೆ ನೇರವಾಗಿ ಸೆಮಿಫೈನಲ್‌ನಲ್ಲಿ ಸ್ಥಾನ ಲಭಿಸಿತ್ತು. ಈ ವಿಭಾಗದ ಚಿನ್ನದ ಪದಕಕ್ಕೆ ಭಾರತ– ಕಜಕಸ್ತಾನ ಹಣಾಹಣಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT