ನವದೆಹಲಿ: ಇದೇ ಶನಿವಾರ ಮತ್ತು ಭಾನುವಾರ ಇಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್ನಲ್ಲಿ ಪಾಲ್ಗೊಳ್ಳಲು ಒಲಿಂಪಿಯನ್ ಕುಸ್ತಿ ತಾರೆ ವಿನೇಶ್ ಫೊಗಟ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ಟ್ರಯಲ್ಸ್ನಲ್ಲಿ ಭಾಗವಹಿಸಲು ವಿನೇಶ್ಗೆ ಅವಕಾಶ ನೀಡಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಅಲೋಕ್ ಅರಾಧೆ ಅವರನ್ನು ಒಳಗೊಂಡ ಪೀಠವು ಹೈಕೋರ್ಟ್ ನಿರ್ದೇಶನವನ್ನು ಎತ್ತಿಹಿಡಿಯಿತು.

‘ಹೈಕೋರ್ಟ್ ಈಗಾಗಲೇ ಆದೇಶ ನೀಡಿದ್ದು, ಈ ಹಂತದಲ್ಲಿ ವಿಶ್ವಾಸ ಮತ್ತು ನಿರೀಕ್ಷೆಗಳು ಹೆಚ್ಚಿವೆ. ಈಗ ಅವರಿಗೆ ಮನೆಗೆ ಹೋಗಲು ಹೇಳುವುದು ಸೂಕ್ತವಲ್ಲ. ಇದನ್ನು ನಾವು ಮುಕ್ತ ಮನಸ್ಸಿನಿಂದ ಹೇಳುತ್ತಿದ್ದೇವೆ’ ಎಂದು ಪೀಠವು, ಫೆಡರೇಷನ್ ಪರ ವಕೀಲರಿಗೆ ತಿಳಿಸಿತು.

‘ಪ್ರತಿವಾದಿಗೆ (ವಿನೇಶ್) ಮೇ 30 ಮತ್ತು 31ರಂದು ನಡೆಯುವ 2026ರ ಏಷ್ಯನ್ ಗೇಮ್ಸ್ ಟ್ರಯಲ್ಸ್ನಲ್ಲಿ ಭಾಗವಹಿಸಲು ಅನುಮತಿ ನೀಡುತ್ತಿದ್ದೇವೆ’ ಎಂದು ನ್ಯಾಯಾಲಯವು ತಿಳಿಸಿತು. ‘ನಾವು ನಿಮ್ಮನ್ನು ತಡೆಯುವುದಿಲ್ಲ. ನೀವು (ವಿನೇಶ್) ಟ್ರಯಲ್ಸ್ನಲ್ಲಿ ಭಾಗವಹಿಸಿ’ ಎಂದೂ ತಿಳಿಸಿತು. ಅವರು ಅತ್ಯುತ್ತಮ ಕುಸ್ತಿಪಟುವಾಗಿದ್ದು, ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿತು.

31 ವರ್ಷ ವಯಸ್ಸಿನ ವಿನೇಶ್ ಅವರು 53 ಕೆ.ಜಿ. ವಿಭಾಗದಲ್ಲಿ ಅಖಾಡಕ್ಕಿಳಿಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.