ಗಾಂಧಿನಗರ (ಪಿಟಿಐ): ಭಾರತದ ವೇಟ್ಲಿಫ್ಟರ್ಗಳುಸೋಮವಾರ ಇಲ್ಲಿ ಆರಂಭವಾಗುವ ಏಷ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ತವರಿನ ಬೆಂಬಲದ ಲಾಭ ಪಡೆದು ಉತ್ತಮ ನಿರ್ವಹಣೆ ತೋರುವ ವಿಶ್ವಾಸದಲ್ಲಿದ್ದಾರೆ. ಮುಂಬರುವ ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಕ್ರೀಡೆಗಳಿಗೆ ಸಿದ್ಧತೆ ನಡೆಸಲು ಅವರಿಗೆ ಈ ಚಾಂಪಿಯನ್ಷಿಪ್ ವೇದಿಕೆಯಾಗಿದೆ.

ಕಾಮನ್ವೆಲ್ತ್ ಕ್ರೀಡೆಗಳು ಜುಲೈ 23 ರಿಂದ ಸ್ಕಾಟ್ಲೆಂಡ್ನ ಗ್ಲಾಸ್ಗೊದಲ್ಲಿ ನಿಗದಿಯಾಗಿದೆ. ಏಷ್ಯನ್ ಕ್ರೀಡೆಗಳು ಸೆ. 19ರಿಂದ ಜಪಾನ್ನಲ್ಲಿ ನಡೆಯಲಿದೆ. ಹೀಗಾಗಿ ಈ ಚಾಂಪಿಯನ್ಷಿಪ್ಗೆ ಹೆಚ್ಚಿನ ಮಹತ್ವ ಬಂದಿದೆ.

ಒಂದು ವಾರ ನಡೆಯುವ ಈ ಚಾಂಪಿಯನ್ಷಿಪ್ ಪ್ರಬಲ ಕಣ ಹೊಂದಿದ್ದು, ಭಾರತವು ಅನುಭವಿ ಮತ್ತು ಯುವ ಪ್ರತಿಭೆಗಳನ್ನು ಹೊಂದಿದೆ. 16 ಮಂದಿಯ ತಂಡದಲ್ಲಿ ಎಂಟು ಪುರುಷರು ಮತ್ತು ಎಂಟು ಮಹಿಳೆಯರು ಇದ್ದಾರೆ. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಭುಜದ ನೋವಿನಿಂದಾಗಿ ಇಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ವಿಂದ್ಯಾರಾಣಿ ದೇವಿ, ಹರ್ಜಿಂದರ್ ಕೌರ್ ಮತ್ತು ಲವ್ಪ್ರೀತ್ ಸಿಂಗ್ ಅವರ ಪ್ರದರ್ಶನದ ಮೇಲೆ ಕಣ್ಣಿದೆ.

ಯುವಪ್ರತಿಭೆಗಳಾದ ವೇದವ್ರತ ಭರಾಲಿ ಮತ್ತು ಜ್ಞಾನೇಶ್ವರಿ ಯಾದವ್ ಅವರ ಮೇಲೂ ಉತ್ತಮ ಪ್ರದರ್ಶನದ ನಿರೀಕ್ಷೆಯಿದೆ.

ಚೀನಾದಲ್ಲಿ ನಡೆದ ಈ ಹಿಂದಿನ ಆವೃತ್ತಿಯಲ್ಲಿ ಭಾರತದ ಇಬ್ಬರು ಮಾತ್ರ ಭಾಗವಹಿಸಿದ್ದು, ಬರಿಗೈಯಲ್ಲಿ ಮರಳಿದ್ದರು.

ಏಪ್ರಿಲ್ನಲ್ಲಿ ನಿಗದಿಯಾಗಿದ್ದ ಈ ಕೂಟವನ್ನು ಪಶ್ಚಿಮ ಏಷ್ಯಾದಲ್ಲಿ ತಲೆದೋರಿದ್ದ ಸಂಘರ್ಷದ ಸ್ಥಿತಿಯಿಂದಾಗಿ ಮುಂದೂಡಲಾಗಿತ್ತು.

30 ರಾಷ್ಟ್ರಗಳ 170 ಮಂದಿ ಕಣಕ್ಕಿಳಿಯಲಿದ್ದಾರೆ.ಇವರಲ್ಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ನರು ಇದ್ದಾರೆ. ಚೀನಾದ ಲಿಯು ಹುವಾನ್ಹುವಾ ಅವರು 102 ಕೆ.ಜಿ. ವಿಭಾಗದಲ್ಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಆಗಿದ್ದಾರೆ.

ಭಾರತ ತಂಡ: ಮಹಿಳೆಯರು: ಕೋಮಲ್ ಕೊಹರ್ (48 ಕೆ.ಜಿ), ಜ್ಞಾನೇಶ್ವರಿ ಯಾದವ್ (53 ಕೆ.ಜಿ), ಕೊಯೆಲ್ ಬರ್ (53 ಕೆಜಿ.), ವಿಂದ್ಯಾರಾಣಿ ದೇವಿ (58 ಕೆ.ಜಿ), ನಿರುಪಮಾ ದೇವಿ (63 ಕೆ.ಜಿ), ಹರ್ಜಿಂದರ್ ಕೌರ್ (69 ಕೆ.ಜಿ), ಸಂಜನ (77 ಕೆ.ಜಿ), ವಂಶಿತಾ ವರ್ಮಾ (86 ಕೆ.ಜಿ), ಮರಿನಾ ದೇವಿ (+86 ಕೆ.ಜಿ)

ಪುರುಷರು: ರಿಷಿಕಾಂತ ಸಿಂಗ್ಚನಾಬಮ್ (60 ಕೆ.ಜಿ), ಎಂ.ರಾಜಾ (65 ಕೆ.ಜಿ), ಪೆಸಿ ಚಾರು (65 ಕೆ.ಜಿ), ಅಜಿತ್ ನಾರಾಯಣ (71 ಕೆ.ಜಿ), ಮಾಧವನ್ ತಿರುಮುರುಗನ್ (71 ಕೆ.ಜಿ), ವೇದವ್ರತ ಬರಾಲಿ (79 ಕೆ.ಜಿ), ಬಾಬು ವಲ್ಲೂರಿ ಅಜಯ (79 ಕೆ.ಜಿ), ಅಭಿಷೇಕ್ ಸುರೇಶನಿಪಾಣೆ (88 ಕೆ.ಜಿ), ಹರಚರಣ್ ಸಿಂಗ್ (110 ಕೆ.ಜಿ), ಪರ್ವ್ ಚೌಧರಿ (94 ಕೆ.ಜಿ), ಲವ್ಪ್ರೀತ್ ಸಿಂಗ್ (+110 ಕೆ.ಜಿ).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-43-1305455805

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.