ಗಾಂಧಿನಗರ: ಭಾನುವಾರ ಇಲ್ಲಿ ಮುಕ್ತಾಯಗೊಂಡ ಏಷ್ಯನ್ ಸೀನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತವು 11 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 11ನೇ ಸ್ಥಾನ ಪಡೆಯಿತು.

ಭಾರತ ಒಂದು ಬೆಳ್ಳಿ ಮತ್ತು 10 ಕಂಚು ಪದಕಗಳನ್ನು ಗೆದ್ದುಕೊಂಡಿತು. 21 ಚಿನ್ನ, 12 ಬೆಳ್ಳಿ ಮತ್ತು 8 ಕಂಚು ಸೇರಿದಂತೆ 41 ಪದಕ ಗೆದ್ದ ಚೀನಾ ಚೀನಾ ಅಗ್ರಸ್ಥಾನದಲ್ಲಿ ಅಭಿಯಾನ ಮುಗಿಸಿತು.

ಉತ್ತರ ಕೊರಿಯಾ 30 ಪದಕಗಳೊಂದಿಗೆ (18 ಚಿನ್ನ, 11 ಬೆಳ್ಳಿ, 1 ಕಂಚು) ಎರಡನೇ ಸ್ಥಾನ ಪಡೆದರೆ, ತೈವಾನ್ 3 ಚಿನ್ನ, 7 ಬೆಳ್ಳಿ ಮತ್ತು 3 ಕಂಚಿನೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿತು.

ಮಹಿಳಾ ತಂಡ ರ್ಯಾಂಕಿಂಗ್ನಲ್ಲಿ ಭಾರತ 487 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ. ಚೀನಾ (578 ಅಂಕ) ಅಗ್ರಸ್ಥಾನ ಗಳಿಸಿದರೆ, ತೈವಾನ್ (491 ಅಂಕಗಳು) ಎರಡನೇ ಸ್ಥಾನದಲ್ಲಿದೆ. ಪುರುಷರ ತಂಡ ರ್ಯಾಂಕಿಂಗ್ನಲ್ಲಿ ಚೀನಾ 593 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ 379 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.