ಬೆಂಗಳೂರು: ರಾಂಚಿಯಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ 400 ಮೀ. ಹರ್ಡಲ್ಸ್ ಓಟದಲ್ಲಿ ಕಾಮನ್ವೆಲ್ತ್ ಕ್ರೀಡೆಗಳಿಗೆ ನಿಗದಿಪಡಿಸಿದ್ದ ಅರ್ಹತಾ ಮಟ್ಟವನ್ನು ಭಾನುವಾರವಷ್ಟೇ ಮೀರಿದ್ದ ಕರ್ನಾಟಕದ ಪಿ.ಯಶಸ್, ಸೋಮವಾರ ಈ ಓಟವನ್ನು 49 ಸೆಕೆಂಡುಗಳಲ್ಲಿ ಪೂರೈಸಿ ಗಮನ ಸೆಳೆದರು.

ಇದು ದೇಶದಲ್ಲಿ ಸಕ್ರಿಯವಾಗಿರುವ ಓಟಗಾರನೊಬ್ಬ ದಾಖಲಿಸಿದ ಅತಿ ವೇಗದ ಅವಧಿ ಎನಿಸಿತು. ಧರುನ್ ಅಯ್ಯಾಸಾಮಿ 2019ರಲ್ಲಿ 48.80 ಸೆ.ಗಳಲ್ಲಿ ಓಡಿದ್ದು ದೀರ್ಘ ಕಾಲದಿಂದ ರಾಷ್ಟ್ರೀಯ ದಾಖಲೆಯಾಗಿ ಉಳಿದಿದೆ. ಯಶಸ್, ತಮ್ಮ ದೀರ್ಘ ಕಾಲದ ಎದುರಾಳಿ, ತಮಿಳುನಾಡಿನ ಸಂತೋಷ್ ಕುಮಾರ್ ಟಿ (49.06 ಸೆ) ಅವರನ್ನು ಹಿಂದೆಹಾಕಿದರು. ಈಗ ಇಬ್ಬರೂ ಕಾಮನ್ವೆಲ್ತ್ ಕೂಟದ ಅರ್ಹತಾ ಮಟ್ಟ (50.5 ಸೆ.) ತಲುಪಿದಂತಾಗಿದೆ. ಕರ್ನಾಟಕದ ಶಿವಾಜಿ ಪರಶುರಾಮ್ ಅವರು 5000 ಮೀ. ಓಟವನ್ನು 14ನಿ.14.43 ಸೆ.ಗಳಲ್ಲಿ ಪೂರೈಸಿ ಚಿನ್ನ ಗೆದ್ದರು.

ಮಹಿಳೆಯರ 400 ಮೀ. ಹರ್ಡಲ್ಸ್ ಓಟದಲ್ಲಿ ಸಿಂಚಲ್ ಕಾವೇರಮ್ಮ (57.77 ಸೆ.) ಬೆಳ್ಳಿ ಪದಕ ಗೆದ್ದರು. ರಾಷ್ಟ್ರೀಯ ದಾಖಲೆ ಹೊಂದಿರುವ ತಮಿಳುನಾಡಿನ ವಿದ್ಯಾ ರಾಮರಾಜ್ (56.61 ಸೆ.) ಅಗ್ರಸ್ಥಾನ ಪಡೆದರು. ಕಾಮನ್ವೆಲ್ತ್ ಕ್ರೀಡೆಗಳಿಗೆ 54.67 ಸೆ.ಗಳ ಅರ್ಹತಾ ಮಟ್ಟ ನಿಗದಿಪಡಿಸಲಾಗಿತ್ತು.

ಹೈಜಂಪ್ನಲ್ಲಿ, ಜೆಎಸ್ಡಬ್ಲ್ಯು ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಅಭಿನಯಾ ಎಸ್.ಶೆಟ್ಟಿ 1.73 ಮೀ. ಎತ್ತರ ಜಿಗಿದು ಕಂಚಿನ ಪದಕ ಗೆದ್ದರು. ಉತ್ತರ ಪ್ರದೇಶದ ಖ್ಯಾತಿ ಮಾಥುರ್ (1.82 ಮೀ.) ಚಿನ್ನ ಗೆದ್ದರು.

ಅಗ್ರ ಟ್ರಿಪಲ್ ಜಂಪರ್ ಪ್ರವೀಣ್ ಚಿತ್ರವೇಲ್ (ತಮಿಳುನಾಡು) 17.08 ಮೀ. ದೂರ ಜಿಗಿದು ಸಿಡಬ್ಲ್ಯುಜಿ ಮಟ್ಟ ದಾಟಿದರು.

ತೂರ್ಗೆ ಹಿನ್ನಡೆ: ಶಾಟ್ಪಟ್ನಲ್ಲಿ ಮಧ್ಯಪ್ರದೇಶದ ಸಮರದೀಪ್ ಸಿಂಗ್ ಗಿಲ್ ಅವರು, ಎರಡು ಬಾರಿಯ ಏಷ್ಯನ್ ಗೇಮ್ಸ್ ಚಾಂಪಿಯನ್ ತಜಿಂದರ್ ಪಾಲ್ ತೂರ್ ಅವರನ್ನು ಹಿಂದೆಹಾಕಿ ಕಾಮನ್ವೆಲ್ತ್ ಗೇಮ್ಸ್ ಟಿಕೆಟ್ ಪಡೆದರು. ಸಮರದೀಪ್ ಅವರು ಗುಂಡನ್ನು 20.46 ಮೀ. ದೂರ ಒಗೆದರು. ಫೇವರಿಟ್ ಆಗಿದ್ದ ತಜಿಂದರ್ ಪಾಲ್ 20.07 ಮೀ. ದೂರ ಎಸೆದರು. ಕಾಮನ್ವೆಲ್ತ್ ಗೇಮ್ಸ್ ಅರ್ಹತಾ ಮಟ್ಟ 20.36 ಮೀ.ಗಳಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-43-1498779789

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.