ನಿಂಗ್ಬೊ (ಚೀನಾ), (ಪಿಟಿಐ): ಭಾರತದ ಆಯುಷ್ ಶೆಟ್ಟಿ ಅವರು ವಿಶ್ವದ ನಾಲ್ಕನೇ ಕ್ರಮಾಂಕದ ಆಟಗಾರ ಜೊನಾಥನ್ ಕ್ರಿಸ್ಟಿ ಅವರಿಗೆ ಶುಕ್ರವಾರ ನೇರ ಗೇಮ್ಗಳಿಂದ ಆಘಾತ ನೀಡಿ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಸೆಮಿಫೈನಲ್ ಪ್ರವೇಶಿಸಿದರು.

ವಿಶ್ವ ಕ್ರಮಾಂಕದಲ್ಲಿ 25ನೇ ಸ್ಥಾನದಲ್ಲಿರುವ ಆಯುಷ್ ಉತ್ತಮ ಹೋರಾಟ ಕಂಡ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 23–21, 21–17 ರಿಂದ ಇಂಡೊನೇಷ್ಯಾದ ಎದುರಾಳಿಯನ್ನು ಸೋಲಿಸಿ ದರು. ಇದು ಇವರಿಬ್ಬರ ನಡುವೆ ನಡೆದ ಮೊದಲ ಮುಖಾಮುಖಿಯಾಗಿತ್ತು.

ಮೊದಲ ಗೇಮ್ ತೀವ್ರ ಹೋರಾಟದಿಂದ ಕೂಡಿದ್ದು, ಇಬ್ಬರು ಸಮಸಮನಾಗಿಯೇ ಸಾಗಿದ್ದರು. ಕ್ರಿಸ್ಟಿ ನಂತರ 18–15ರಲ್ಲಿ ಮುನ್ನಡೆದರಲ್ಲದೇ ಗೇಮ್ ಪಾಯಿಂಟ್ ಪಡೆಯುವ ಹಂತಕ್ಕೆ ತಲುಪಿದ್ದರು. ಆದರೆ ಈ ವೇಳೆ ಆಯುಷ್ ಅಮೋಘ ರೀತಿ ಚೇತರಿಸಿಕೊಂಡು ಗೇಮ್ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್ ಸಹ ಹೋರಾಟದಿಂದ ಕೂಡಿದ್ದು, ವಿರಾಮದ ವೇಳೆ ಆಯುಷ್ 11–9 ರಿಂದ ಮುಂದಿದ್ದರು. ಆದರೆ ನಂತರ ಅವರು ಮುನ್ನಡೆ ಬಿಟ್ಟುಕೊಡಲಿಲ್ಲ.

ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಕ್ರಿಸ್ಟಿ, 2020ರಲ್ಲಿ ಥಾಮಸ್ ಕಪ್ ಗೆದ್ದ ಇಂಡೊನೇಷ್ಯಾ ತಂಡದ ಭಾಗವಾಗಿದ್ದರು.

ಕುನ್ಲಾವುತ್ ಎದುರಾಳಿ: ಬೆಂಗಳೂರಿನ ಆಟಗಾರ ಆಯುಷ್ ಸೆಮಿಫೈನಲ್ನಲ್ಲಿ, ವಿಶ್ವದ ಅಗ್ರಮಾನ್ಯ ಆಟಗಾರ ಕುನ್ಲಾವುತ್ ವಿಟಿಡ್ಸರ್ನ್ ಅವರನ್ನು ಎದುರಿಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ವಿಜೇತರಾಗಿರುವ ಥಾಯ್ಲೆಂಡ್ನ ಕುನ್ಲಾವುತ್ ಇನ್ನೊಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 20–22, 21–9, 21–9 ರಿಂದ ವೆಂಗ್ಹಾಂಗ್ ಯಾಂಗ್ (ಚೀನಾ) ಅವರನ್ನು ಪರಾಭವಗೊಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-51-272394239

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.