ನವದೆಹಲಿ : ‘ಅಗ್ರ ಕ್ರಮಾಂಕದ ಆಟಗಾರರ ಸವಾಲನ್ನು ಎದುರಿಸುವ ವೇಳೆ ದೀರ್ಘ ರ್ಯಾಲಿಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ತಾಳ್ಮೆ ಅಗತ್ಯ. ಪಾದಚಲನೆಯ ಮೇಲೆ ಹೆಚ್ಚಿನ ಹಿಡಿತವೂ ಬೇಕಾಗುತ್ತದೆ’ ಎಂದು ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಆಯುಷ್ ಶೆಟ್ಟಿ ಹೇಳಿದರು.

ಶ್ರೇಯಾಂಕರಹಿತ ಆಟಗಾರನಾಗಿದ್ದ20 ವರ್ಷದ ಆಯುಷ್, ಚೀನಾದಲ್ಲಿ ಭಾನುವಾರ ಮುಕ್ತಾಯಗೊಂಡ ಚಾಂಪಿ ಯನ್ಷಿಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ರನ್ನರ್ಸ್ ಅಪ್ ಆಗಿದ್ದರು. ಈ ಹಾದಿಯಲ್ಲಿ ತಮಗಿಂತ ಮೇಲಿನ ಕ್ರಮಾಂಕದ ಆಟಗಾರರಿಗೆ ಆಘಾತ ನೀಡಿದ್ದರು.

ಅವರ ಯಶಸ್ಸಿನ ಓಟವು ಫೈನಲ್ ನಲ್ಲಿ ವಿಶ್ವದ ಎರಡನೇ ಕ್ರಮಾಂಕದ ಶಿ ಯು ಕಿ (ಚೀನಾ) ವಿರುದ್ಧ ನೇರ ಗೇಮ್ಗಳಲ್ಲಿ ಸೋಲುವುದರೊಂದಿಗೆ ಕೊನೆಗೊಂಡಿತ್ತು. ಆದರೆ, ಪುರುಷರ ಸಿಂಗಲ್ಸ್ನಲ್ಲಿ 61 ವರ್ಷಗಳ ನಂತರ ಫೈನಲ್ ತಲುಪಿದ್ದ ಭಾರತದ ಆಟಗಾರ ನೆಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

‘ಹೌದು, ಫೈನಲ್ನಲ್ಲಿ ನನಗೆ ದಾಳಿ ಮಾಡಲು ಎದುರಾಳಿ ಆಟಗಾರ ಹೆಚ್ಚಿನ ಅವಕಾಶ ನೀಡಲಿಲ್ಲ. ಅವರು ತನ್ನ ಲೆಂಥ್ ಅನ್ನು ಪರಿಪೂರ್ಣವಾಗಿ ಇಟ್ಟುಕೊಂಡಿ ದ್ದರು. ಅವರು ನಿಜವಾಗಿಯೂ ನನಗೆ ನೆಟ್ ಬಳಿ ಯಾವುದೇ ಅವಕಾಶವನ್ನು ನೀಡಲಿಲ್ಲ. ಹೀಗಾಗಿ, ಆಕ್ರಮಣಕಾರಿ ಆಟದ ಅವಕಾಶವನ್ನು ಸೃಷ್ಟಿಸಲು ನನ್ನಿಂದ ಸಾಧ್ಯವಾಗಲಿಲ್ಲ’ ಎಂದು ಉಡುಪಿ ಜಿಲ್ಲೆಯ ಕಾರ್ಕಳದ ಆಯುಷ್ ಸೋಮವಾರ ಮಾಧ್ಯಮ ಸಂವಾದದಲ್ಲಿ ಹೇಳಿದರು.

‘ನನ್ನ ಈ ಲೋಪಗಳನ್ನು ಸರಿಪಡಿಸಿ ಕೊಳ್ಳುವತ್ತ ಗಮನಹರಿಸಬೇಕಾಗಿದೆ. ಆದರೆ, ಉನ್ನತ ಕ್ರಮಾಂಕದ ಆಟಗಾರರನ್ನು ಎದುರಿಸುವಾಗ ತಾಳ್ಮೆ ಮುಖ್ಯ. ದೀರ್ಘ ರ್ಯಾಲಿ ಆಡುವಾಗ ಸ್ವಲ್ಪ ತಾಳ್ಮೆ ಕಳೆದುಕೊಂಡೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.