ಜಕಾರ್ತಾ: ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿಕೊಂಡ ಭಾರತದ ಯುವ ತಾರೆ ಆಯುಷ್ ಶೆಟ್ಟಿ, ಚೀನಾದ ಎದುರಾಳಿಯನ್ನು ಸೋಲಿಸಿ ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಪ್ರಿಕ್ವಾರ್ಟರ್ಫೈನಲ್ ತಲುಪಿದರು. ಆದರೆ ಡಬಲ್ಸ್ನಲ್ಲಿ ಭಾರತದ ಅಗ್ರ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಅವರು ಬುಧವಾರ ಮೊದಲ ಗೇಮ್ನ ಅರ್ಧದಲ್ಲೇ ಪಂದ್ಯದಿಂದ ನಿವೃತ್ತರಾಗಬೇಕಾಯಿತು.

ವಿಶ್ವ ಕ್ರಮಾಂಕದಲ್ಲಿ 20ನೇ ಸ್ಥಾನದಲ್ಲಿರುವ ಆಯುಷ್ ಶೆಟ್ಟಿ ಮೊದಲ ಸುತ್ತಿನಲ್ಲಿ 8–21, 22–20, 21–15 ರಿಂದ 15ನೇ ಕ್ರಮಾಂಕದ ಹಾಂಗ್ ಯಾಂಗ್ ವೆಂಗ್ ಅವರನ್ನು ಸೋಲಿಸಿದರು. ಈ ಪಂದ್ಯ 66 ನಿಮಿಷ ನಡೆಯಿತು.

ಮೊದಲ ಗೇಮ್ಅನ್ನು ಸುಲಭವಾಗಿ ಕಳೆದುಕೊಂಡಿದ್ದ ಆಯುಷ್ ಎರಡನೆಯ ದರಲ್ಲಿ 11–15ರಲ್ಲಿ ಹಿನ್ನಡೆಯಲ್ಲಿದ್ದು ಸೋಲಿನ ಆತಂಕದಲ್ಲಿದ್ದರು. ಆದರೆ ಅಮೋಘ ರ್ಯಾಲಿಗಳ ಮೂಲಕ ಆ ಗೇಮ್ ಗೆದ್ದ ಆಯುಷ್ ನಿರ್ಣಾಯಕ ಗೇಮ್ಗೆ ಪಂದ್ಯ ವಿಸ್ತರಿಸಿದರು. ಬ್ಯಾಡ್ಮಿಂಟನ್ ಏಷ್ಯಾ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಆಯುಷ್ ಈ ಗೇಮ್ನಲ್ಲಿ ಬಿಗಿ ಹಿಡಿತ ಸಾಧಿಸಿದರು.

ಭಾರತದ ಆಟಗಾರ ಎರಡನೇ ಸುತ್ತಿನಲ್ಲಿ ಹಾಂಗ್ಕಾಂಗ್ನ ಲೀ ಚಿಯುಕ್ ಯಿಯು ಅವರನ್ನು ಎದುರಿಸಲಿದ್ದಾರೆ.

ಇದೇ ವೇಳೆ ಸಾತ್ವಿಕ್ಸಾಯಿರಾಜ್ರಣಕಿರೆಡ್ಡಿ ಭುಜದ ನೋವಿನಿಂದ ಬಳಲಿದ ಭಾರತದ ಡಬಲ್ಸ್ ಜೋಡಿ (ಚಿರಾಗ್ ಶೆಟ್ಟಿ ಜೊತೆಗಾರ) ಮೊದಲ ಸುತ್ತಿನ ಪಂದ್ಯದಲ್ಲಿ ಹಿಂದೆಸರಿದರು. ಆಗ ಮಲೇಷ್ಯಾದ ಕಾಂಗ್ ಖಾಯಿ ಶಿಂಗ್– ಆರನ್ ತಾಜ್ ಜೋಡಿ 11–6 ರಿಂದ ಮುನ್ನಡೆ ಸಾಧಿಸಿತ್ತು.

ಪುರುಷರ ಸಿಂಗಲ್ಸ್ನಲ್ಲಿ ಎಚ್.ಎಸ್.ಪ್ರಣಯ್ 17–21, 21–16, 19–21 ರಲ್ಲಿ ಐರ್ಲೆಂಡ್ನ ನಾಟ್ ನುಯೆನ್ ಅವರಿಗೆ ಸೋತರು.

ಮಿಶ್ರ ಡಬಲ್ಸ್ನಲ್ಲಿ 41ನೇ ಕ್ರಮಾಂಕದ ರೋಹನ್ ಕಪೂರ್– ರುತ್ವಿಕಾ ಗದ್ದೆ ಜೋಡಿ 21–14, 21–14 ರಿಂದ ಚೀನಾ ತೈಎಪಿಯ ಪೊ ಸುವಾನ್ ಯಾಂಗ್– ಲಿಂಗ್ ಪಾಂಗ್ ಹು ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-1542208496

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.