ನಿಂಗ್ಬೊ (ಚೀನಾ), (ಪಿಟಿಐ): ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವಲಿನ್ ಶಿ ಫೆಂಗ್ ಅವರಿಗೆ ಬುಧವಾರ ಆಘಾತ ನೀಡಿದ ಭಾರತದ ಆಯುಷ್ಶೆಟ್ಟಿ, ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ನ ಪುರುಷರ ಸಿಂಗಲ್ಸ್ನಲ್ಲಿ ಎರಡನೇ ಸುತ್ತನ್ನು ಪ್ರವೇಶಿಸಿದರು. ಎಚ್.ಎಸ್.ಪ್ರಣಯ್ ಮತ್ತು ಮಹಿಳೆಯರ ಸಿಂಗಲ್ಸ್ನಲ್ಲಿ ಅನುಭವಿ ಪಿ.ವಿ.ಸಿಂಧು ಸಹ ಗೆಲುವಿನೊಡನೆ ಅಭಿಯಾನ ಆರಂಭಿಸಿದರು.

ವಿಶ್ವ ಕ್ರಮಾಂಕದಲ್ಲಿ 25ನೇ ಸ್ಥಾನ ದಲ್ಲಿರುವ ಆಯುಷ್ 21–13, 21–16 ರಿಂದ ಚೀನಾದ ಲಿನ್ ಅವರನ್ನು 51 ನಿಮಿಷಗಳಲ್ಲಿ ಪರಾಭವಗೊಳಿಸಿದರು.

ಐದನೇ ಶ್ರೇಯಾಂಕದ ಲಿನ್ 4–1 ಆರಂಭಿಕ ಮುನ್ನಡೆ ಸಾಧಿಸಿದರು. ಆದರೆ 7–7ರಲ್ಲಿ ಸಮ ಮಾಡಿಕೊಂಡ ನಂತರ ಆಯುಷ್ ನಿಧಾನವಾಗಿ ಹಿಡಿತ ಪಡೆಯತೊಡಗಿ ಮೊದಲ ಗೇಮ್ ಪಡೆದರು. ಬದಿಗಳ ಬದಲಾವಣೆಯ ನಂತರ ಚೀನಾದ ಆಟಗಾರ 4–1 ಹಾಗೂ ನಂತರ 12–9 ರಲ್ಲಿ ಮುನ್ನಡೆ ಗಳಿಸಿದ್ದರು. ಆದರೆ ಈ ಹಂತದಲ್ಲಿ ಸತತವಾಗಿ ಆರು ಪಾಯಿಂಟ್ಸ್ ಪಡೆದ ಆಯುಷ್ ಮೇಲುಗೈ ಸಾಧಿಸಿ 18–13ರಲ್ಲಿ ಮುನ್ನಡೆ ಗಳಿಸಿದರು. ಲಿನ್ ಹಿನ್ನಡೆಯನ್ನು 16–18ಕ್ಕೆ ಇಳಿಸಿದರೂ ಆಯುಷ್ ಗೆಲುವನ್ನು ತಡೆಯಲಾಗಲಿಲ್ಲ.

ಎಚ್.ಎಸ್.ಪ್ರಣಯ್ 24–22, 21–12 ರಿಂದ ವಿಯೆಟ್ನಾಮಿನ ನೂಯೆನ್ ಹಯ್ ಅವರನ್ನು ಸೋಲಿಸಿದರು.

ಸಿಂಧು 15–21, 21–11, 21–19 ರಿಂದ ಮಲೇಷ್ಯಾದ ವಾಂಗ್ ಲಿಂಗ್ ಚಿಂಗ್ ಅವರನ್ನು ಪರಾಭವಗೊಳಿಸಿದರು.ಭಾರತದ ಆಟಗಾರ್ತಿ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ವಾಂಗ್ ಝಿ ಇ (ಚೀನಾ) ಅವರನ್ನು ಎದುರಿಸಲಿದ್ದಾರೆ.ಈ ಹಿಂದೆ ಇವರಿಬ್ಬರು ಆರು ಬಾರಿ ಮುಖಾಮುಖಿಯಾಗಿದ್ದು 3–3 ಸೋಲು–ಗೆಲುವಿನ ದಾಖಲೆ ಹೊಂದಿದ್ದಾರೆ.

ಲಕ್ಷ್ಯ ನಿರ್ಗಮನ: ಆಲ್ ಇಂಗ್ಲೆಂಡ್ ಟೂರ್ನಿಯ ರನ್ನರ್ ಅಪ್ ಲಕ್ಷ್ಯ ಸೇನ್ ಅವರು ತಮಗಿಂತ ಕೆಳ ಕ್ರಮಾಂಕದ ಆಟಗಾರ, ಹಾಂಗ್ಕಾಂಗ್ನ ಲೀ ಚಿಯುಕ್ ಇಯು ಅವರಿಗೆ 12–21, 19–21ರಲ್ಲಿ ಮಣಿದರು.

ಸಿಂಗಪುರದ ಲ್ಹೊ ಕೀನ್ ಯು 18–21, 21–9, 21–11 ರಿಂದ ವಿಶ್ವದ ಮಾಜಿ ನಂಬರ್ ವನ್ ಆಟಗಾರ ಕಿದಂಬಿ ಶ್ರೀಕಾಂತ್ ಅವರನ್ನು ಸೋಲಿಸಿದರು.

ಮಹಿಳೆಯರ ಸಿಂಗಲ್ಸ್ನಲ್ಲಿ ತನ್ವಿ ಶರ್ಮಾ ಮತ್ತು ಮಾಳವಿಕಾ ಬನ್ಸೋಡ್ ಅವರು ಕ್ರಮವಾಗಿ ಮಲೇಷ್ಯಾದ ಲೆಟ್ಶಾನಾ ಕರುಪಥೆವನ್ ಮತ್ತು ಥಾಯ್ಲೆಂಡ್ನ ಬುಸಾನನ್ ಒಂಗ್ಬಮ್ರುಂಗ್ಘಾನಾ ಅವರೆದುರು ಸೋಲನುಭವಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-51-1019596275

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.