ನಿಂಗ್ಬೊ (ಚೀನಾ), (ಪಿಟಿಐ): ಭಾರತದ ಆಯುಷ್ ಶೆಟ್ಟಿ, ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಗುರುವಾರ ನೇರ ಗೇಮ್ಗಳ ಗೆಲುವು ಸಾಧಿಸಿ ಎಂಟರ ಘಟ್ಟಕ್ಕೆ ದಾಪುಗಾಲಿಟ್ಟರು. ಆದರೆ ಅನುಭವಿಗಳಾದ ಪಿ.ವಿ.ಸಿಂಧು ಮತ್ತು ಎಚ್.ಎಸ್.ಪ್ರಣಯ್ ಅವರ ಸವಾಲು ಅಂತ್ಯಗೊಂಡಿತು.

ವಿಶ್ವ ಕ್ರಮಾಂಕದಲ್ಲಿ 25ನೇ ಸ್ಥಾನದಲ್ಲಿರುವ ಆಯುಷ್ 21–16, 21–12 ರಿಂದ 20ನೇ ಕ್ರಮಾಂಕದ ಆಟಗಾರ ಚಿ ಯು ಜೆನ್ (ತೈವಾನ್) ಅವರನ್ನು ಅಧಿಕಾರಯುತವಾಗಿ ಸೋಲಿಸಿದರು. ಕನ್ನಡಿಗ ಆಯುಷ್ ಮುಂದಿನ ಸುತ್ತಿನಲ್ಲಿ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು ಎದುರಿಸಲಿದ್ದಾರೆ.

ಎರಡು ಒಲಿಂಪಿಕ್ಸ್ಗಳಲ್ಲಿ ಪದಕ ಗೆದ್ದಿರುವ ಸಿಂಧು ಮಹಿಳೆಯರ ಸಿಂಗಲ್ಸ್ ಪ್ರಿಕ್ವಾರ್ಟರ್ಫೈನಲ್ನಲ್ಲಿ 18–21, 8–21 ರಲ್ಲಿ ಚೀನಾದ ವಾಂಗ್ ಝಿಯಿ ಅವರಿಗೆ ಸೋತರು. ಎರಡನೇ ಶ್ರೇಯಾಂಕದ ಝಿಯಿ ಅವರಿಗೆ 46 ನಿಮಿಷಗಳಲ್ಲಿ ಗೆಲುವು ಒಲಿಯಿತು.

ಜಪಾನ್ನ ಟೊಮೊಕಾ ಮಿಯಾಝಾಕಿ ಇನ್ನೊಂದು ಪ್ರಿಕ್ವಾರ್ಟರ್ ಫೈನಲ್ನಲ್ಲಿ ಭಾರತದ ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ಅವರನ್ನು 21–17, 21–9 ರಿಂದ ಹಿಮ್ಮೆಟ್ಟಿಸಿದರು.

33 ವರ್ಷದ ಪ್ರಣಯ್ ಪುರುಷರ ಸಿಂಗಲ್ಸ್ನಲ್ಲಿ 12–21, 19–21 ರಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ ಅವರಿಗೆ ಮಣಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-51-614761346

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.