ನಿಂಗ್ಬೊ (ಚೀನಾ), (ಪಿಟಿಐ): ಭಾರತದ ಅನುಭವಿಗಳಾದ ಧ್ರುವ್ ಕಪಿಲ– ತನಿಶಾ ಕ್ರಾಸ್ಟೊ ಜೋಡಿ ಮೂರು ಗೇಮ್ಗಳ ಹಣಾಹಣಿಯಲ್ಲಿ ಥಾಯ್ಲೆಂಡ್ನ ಜೋಡಿ ಯನ್ನು ಸೋಲಿಸಿ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಷಿಪ್ನ ಮಿಶ್ರ ಡಬಲ್ಸ್ ಪ್ರಿಕ್ವಾರ್ಟರ್ಫೈನಲ್ಗೆ ತಲುಪಿತು. ಆದರೆ ಭಾರತದ ಇನ್ನೆರಡು ಜೋಡಿಗಳು ಮೊದಲ ಸುತ್ತಿನಲ್ಲೇ ಹೊರಬಿದ್ದವು.

ನಿಂಗ್ಬೊ ಒಲಿಂಪಿಕ್ ಸೆಂಟರ್ನಲ್ಲಿ ನಡೆದ 32ರ ಸುತ್ತಿನ ಪಂದ್ಯದಲ್ಲ ಧ್ರುವ್ ಕಪಿಲಾ– ತನಿಶಾ ಕ್ರಾಸ್ಟೊ ಜೋಡಿ 21–14, 11–21, 21–15 ರಿಂದ ಥಾಯ್ಲೆಂಡ್ನ ಪಿ.ಹೊರ್ಬನ್ಲ್ಯುಕಿಟ್– ಬೆನ್ಯಪಾ ಏಮ್ಸಾರ್ದ್ ಜೋಡಿಯನ್ನು ಸೋಲಿಸಿತು.

ಆದರೆ ರೋಹನ್ ಕಪೂರ್ ಮತ್ತು ಋತ್ವಿಕಾ ಶಿವಾನಿ ಗದ್ದೆ ಜೋಡಿ 13–21, 19–21 ರಲ್ಲಿ ಎಂಟನೇ ಶ್ರೇಯಾಂಕದ ಗ್ಹೊ ಸೂನ್ ಹುವಾತ್ – ಲೈ ಶೆವೊನ್ ಜೇಮಿ ಅವರಿಗೆ ಮಣಿಯಿತು. ಮಲೇಷ್ಯಾದ ಜೋಡಿ 34 ನಿಮಿಷಗಳಲ್ಲಿ ಜಯಗಳಿಸಿತು.

ಭಾರತದ ಜೋಡಿ ಮೊದಲ ಗೇಮ್ನಲ್ಲಿ ಲಯ ಕಂಡುಕೊಳ್ಳಲು ಪರದಾಡಿತು. ಎರಡನೇ ಗೇಮ್ನಲ್ಲಿ ಸ್ವಲ್ಪ ಪ್ರತಿರೋಧ ತೋರಿದರೂ, ಅನುಭವಿ ಮಲೇಷ್ಯಾದ ಜೋಡಿ ಅಂತಿಮವಾಗಿ ಮೇಲುಗೈ ಸಾಧಿಸಿ ಜಯಗಳಿಸಿತು.

ಇನ್ನೊಂದು ಪಂದ್ಯದಲ್ಲಿ ಅಶಿತ್ ಸೂರ್ಯ– ಅಮೃತಾ ಪ್ರಮುಥೇಶ್ ಜೋಡಿ 16–21, 15–21ರಲ್ಲಿ ಮಲೇಷ್ಯಾದ ವಾಂಗ್ ತಿಯೆನ್ ಸಿ– ಲಿಮ್ ಚಿಯೆ ಸಿಯೆನ್ ಅವರಿಗೆ 31 ನಿಮಿಷಗಳಲ್ಲಿ ಮಣಿಯಿತು. ಬುಧವಾರ ಸಿಂಗಲ್ಸ್ ಪಂದ್ಯಗಳು ಆರಂಭವಾಗ ಲಿದ್ದು, ಭಾರತದ ಅಗ್ರ ತಾರೆಗಳು ಅಭಿಯಾನ ಆರಂಭ ಮಾಡಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-4-1584898065

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.