ನವದೆಹಲಿ (ಪಿಟಿಐ): ಬ್ಯಾಡ್ಮಿಂಟನ್ ಪಂದ್ಯಗಳಲ್ಲಿ ‘15x3 ಸ್ಕೋರಿಂಗ್ ನಿಯಮ’ ಪರಿಷ್ಕೃತಗೊಳಿಸಲಾಗುತ್ತಿದೆ. ಇದರಿಂದ ಹೆಚ್ಚು ವ್ಯತ್ಯಾಸವೇನೂ ಆಗಲ್ಲ ಎಂದು ಭಾರತದ ಡಬಲ್ಸ್ ಆಟಗಾರ ಚಿರಾಗ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಈಚೆಗಷ್ಟೇ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಈ ನಿಯಮವನ್ನು ಪರಿಷ್ಕರಣೆಗೊಳಿಸಿದ್ದರ ಕುರಿತು ಘೋಷಣೆ ಮಾಡಿತ್ತು. ಇದು 2027ರ ಜನವರಿ 4ರಿಂದ ಜಾರಿಗೆ ಬರಲಿದೆ. ಈ ನಿಯಮ ಕುರಿತು ಹಲವು ಮಾಜಿ ಮತ್ತು ಹಾಲಿ ಆಟಗಾರರಿಂದ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿವೆ.

ಇಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಚಿರಾಗ್, ‘11X5 ಸ್ಕೋರಿಂಗ್ ನಿಯಮದ ಪಂದ್ಯಗಳಲ್ಲಿ ನಾನು ಆಡಿದ್ದೇನೆ. ಅಪಾರ ವೇಗದ ಆಟ ಅದು. ತುಂಬಾ ಚುರುಕಾಗಿ ಆಡಬೇಕು. ಅದನ್ನು ನೋಡಿದರೆ 15X3 ಗೇಮ್ ಪಂದ್ಯಗಳು ಕಷ್ಟಕರವೇನಲ್ಲ. ವೇಗ ಮತ್ತು ಶಕ್ತಿ ಎರಡನ್ನೂ ಮೇಳೈಸಿ ಆಡುವ ಅಗತ್ಯವಿರುತ್ತದೆ’ ಎಂದು ವಿಶ್ಲೇಷಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-550184926

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.