ಸಿಂಗಪುರ (ಪಿಟಿಐ): ಭಾರತದ ತಾರಾ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಭಾನುವಾರ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.ಇದರೊಂದಿಗೆ ಎರಡು ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡರು.

ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಚಾಂಪಿಯನ್ ಆಗಿರುವ ಸಾತ್ವಿಕ್–ಚಿರಾಗ್ ಅವರು ಆರಂಭಿಕ ಗೇಮ್ ಹಿನ್ನಡೆಯಿಂದ ಚೇತರಿಸಿಕೊಂಡು 18-21, 21-17, 21-16ರಿಂದ ಇಂಡೊನೇಷ್ಯಾದ ಫಜರ್ ಅಲ್ಫಿಯಾನ್ ಹಾಗೂ ಮುಹಮ್ಮದ್ ಶೊಹಿಬುಲ್ ಫಿಕ್ರಿ ಅವರನ್ನು ಮಣಿಸಿದರು. ಇಲ್ಲಿ ಮೊದಲ ಬಾರಿ ಕಿರೀಟ ಗೆಲ್ಲುತ್ತಿದ್ದಂತೆ ಅವರು ಕುಣಿದು ಕುಪ್ಪಳಿಸಿದರು.

2024ರಲ್ಲಿ ಥಾಯ್ಲೆಂಡ್ ಓಪನ್ ಬಳಿಕ ಸಾತ್ವಿಕ್–ಚಿರಾಗ್ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ. ಕಳೆದ ಎರಡು ವರ್ಷಗಳಲ್ಲಿ ಅವರು ನಾಲ್ಕು ಟೂರ್ನಿಗಳಲ್ಲಿ ಪ್ರಶಸ್ತಿ ಸುತ್ತು ತಲುಪಿ, ರನ್ನರ್ಸ್ ಅಪ್ನೊಂದಿಗೆ ಅಭಿಯಾನ ಮುಗಿಸಿದ್ದರು. ಎರಡು ವಾರಗಳ ಹಿಂದೆ ಥಾಯ್ಲೆಂಡ್ ಓಪನ್ ಫೈನಲ್ನಲ್ಲೂ ಎಡವಿದ್ದರು.

ವಿಶ್ವದ ನಾಲ್ಕನೇ ಕ್ರಮಾಂಕದ ಚಿರಾಗ್ ಮತ್ತು ಸಾತ್ವಿಕ್, ಸಿಂಗಪುರ ಓಪನ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಜೋಡಿ ಎಂಬ ಹಿರಿಮೆಗೂ ಪಾತ್ರರಾದರು. ಇದು ಅವರ ಬಿಡಬ್ಲ್ಯುಎಫ್ ಸೂಪರ್ 750 ಮಟ್ಟದ ಮೂರನೇ ಹಾಗೂ ವಿಶ್ವ ಪ್ರವಾಸದಲ್ಲಿ ಒಂಬತ್ತನೇ ಪ್ರತಿಷ್ಠಿತ ಕಿರೀಟವಾಗಿದೆ.

ಇಂಡೊನೇಷ್ಯಾದ ಈ ಜೋಡಿಯ ವಿರುದ್ಧ ಭಾರತದ ಆಟಗಾರರು 1-2 ಗೆಲುವಿನ ದಾಖಲೆಯೊಂದಿಗೆ ಫೈನಲ್ನಲ್ಲಿ ಕಣಕ್ಕಿಳಿದಿದ್ದರು. ಜನವರಿಯಲ್ಲಿ ನಡೆದ ಮಲೇಷ್ಯಾ ಓಪನ್ ಕ್ವಾರ್ಟರ್ ಫೈನಲ್ನಲ್ಲಿ ಇದೇ ಆಟಗಾರರ ವಿರುದ್ಧ ಸಾತ್ವಿಕ್–ಚಿರಾಗ್ ನೇರ ಗೇಮ್ಗಳಿಂದ ಮುಗ್ಗರಿಸಿದ್ದರು.

ಭಾರತದ ಜೋಡಿಯು ಸೆಮಿಫೈನಲ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಕಿಮ್ ವಾನ್ ಹೊ ಮತ್ತು ಸಿಯೊ ಸಿಯುಂಗ್ ಜೇ (ದಕ್ಷಿಣ ಕೊರಿಯಾ) ಅವರಿಗೆ ಆಘಾತ ನೀಡಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-5930236

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.