ಬ್ಯಾಂಕಾಕ್ (ಪಿಟಿಐ): ಅಗ್ರ ಶ್ರೇಯಾಂಕದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿಯು ಶುಕ್ರವಾರ ಥಾಯ್ಲೆಂಡ್ ಓಪನ್ ಸೂಪರ್ 500 ಟೂರ್ನಿಯಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿತು. ಆದರೆ, ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಕ್ವಾರ್ಟರ್ ಫೈನಲ್ನಲ್ಲಿ ಸೋಲುವುದರೊಂದಿಗೆ ಸಿಂಗಲ್ಸ್ನಲ್ಲಿ ಭಾರತದ ಅಭಿಯಾನಕ್ಕೆ ತೆರೆಬಿತ್ತು.

ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸಾತ್ವಿಕ್–ಚಿರಾಗ್ ಅವರು 21–12, 21–13ರಿಂದ ಆರನೇ ಶ್ರೇಯಾಂಕದ ತಕುಮಿ ನೊಮುರಾ– ಯುಯಿಚಿ ಶಿಮೋಗಮಿ ಜೋಡಿಯನ್ನು ಹಿಮ್ಮೆಟ್ಟಿಸಿದರು. ಭಾರತದ ಆಟಗಾರರಿಗೆ ಯಾವ ಹಂತದಲ್ಲೂ ಜಪಾನ್ ಜೋಡಿ ಸರಿಸಾಟಿಯಾಗಲಿಲ್ಲ.

ಉತ್ತಮ ಲಯದಲ್ಲಿರುವ ಸಾತ್ವಿಕ್– ಚಿರಾಗ್ ಜೋಡಿಯು ನಾಲ್ಕರ ಘಟ್ಟದ ಪಂದ್ಯದಲ್ಲಿ ಮಲೇಷ್ಯಾದ ನೂರ್ ಇಝುದ್ದೀನ್ ಮತ್ತು ಗೋ ಸ್ಜೆ ಫೀ ಅವರ ಸವಾಲನ್ನು ಎದುರಿಸಲಿದ್ದಾರೆ.

ಒಟ್ಟು ₹4.80 ಕೋಟಿ ಬಹುಮಾನ ಮೊತ್ತದ ಟೂರ್ನಿ ಇದಾಗಿದೆ.

ಸಿಂಧುಗೆ ನಿರಾಸೆ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು, ಮೂರು ಗೇಮ್ಗಳ ತೀವ್ರ ಹೋರಾಟದ ಬಳಿಕ 21-19, 18-21, 15-21ರಿಂದ ಜಪಾನ್ನ ಯಮಗುಚಿ ಅವರಿಗೆ ಶರಣಾ ದರು. ಮೊದಲ ಗೇಮ್ನಲ್ಲಿ ಮೇಲುಗೈ ಸಾಧಿಸಿದ್ದ ಆರನೇ ಶ್ರೇಯಾಂಕದ ಸಿಂಧು ನಂತರ ಲಯ ತಪ್ಪಿದರು.

ಸಿಂಧು ಸೇರಿದಂತೆ ಭಾರತದ ಏಳು ಆಟಗಾರ್ತಿಯರು ಸಿಂಗಲ್ಸ್ನಲ್ಲಿ ಕಣದಲ್ಲಿದ್ದರು. ಮಾಳವಿಕಾ ಬನ್ಸೋಡ್ ಮತ್ತು ದೇವಿಕಾ ಸಿಹಾಗ್ ಎರಡನೇ ಸುತ್ತಿನಲ್ಲಿ ಹೊರಬಿದ್ದರೆ, ಉಳಿದ ನಾಲ್ವರಿಗೆ ಮೊದಲ ಸುತ್ತನ್ನು ದಾಟಲು ಸಾಧ್ಯವಾಗಲಿಲ್ಲ.

ಪುರುಷರ ಸಿಂಗಲ್ಸ್ನಲ್ಲಿ ಭಾರತದ ಕೊನೆಯ ಭರವಸೆಯಾಗಿದ್ದ ಸೇನ್ 19–21, 16–21ರ ನೇರ ಗೇಮ್ಗಳಿಂದ ಎರಡನೇ ಶ್ರೇಯಾಂಕದ ಕುನ್ಲಾವುತ್ ವಿಟಿಡ್ಸರ್ನ್ (ಥಾಯ್ಲೆಂಡ್) ಅವರಿಗೆ ಶರಣಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-43-1751512754

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.