ನವದೆಹಲಿ : ಡಿಸ್ಕಸ್ ಥ್ರೋ ಅಥ್ಲೀಟ್ ಬಾನವೀರ್ ಸಿಂಗ್ ಅವರ ಮೇಲೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು (ಎಡಿಎಪಿ) ಏಳು ವರ್ಷ ನಿಷೇಧ ವಿಧಿಸಿದೆ.

ಅವರು ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರಿಂದ ಶಿಸ್ತು ಸಮಿತಿಯು ಐದು ವರ್ಷ ನಿಷೇಧ ಶಿಕ್ಷೆ ವಿಧಿಸಿತ್ತು. ನಾಡಾ ಎರಡು ವರ್ಷ ಹೆಚ್ಚುವರಿಯಾಗಿ ಶಿಕ್ಷೆಯನ್ನು ಪ್ರಕಟಿಸಿದೆ. 2024ರ ಡಿಸೆಂಬರ್ 23ರಿಂದ ಈ ನಿಷೇಧವು ಅನ್ವಯವಾಗಲಿದೆ.

ಅವರು ಸ್ಟೆರಾಯ್ಡ್ ಮೆಥಾಂಡೀನೊನ್ ಸೇವಿಸಿದ್ದು ಪರೀಕ್ಷೆಯಲ್ಲಿ ಸಾಬೀತಾಗಿತ್ತು. ಅವರು ಈಗಾಗಲೇ 12 ತಿಂಗಳ ಅವಧಿಯಲ್ಲಿ ಮೂರು ಬಾರಿ ಚಲನವಲನ (ವೇರ್ ಅಬೌಟ್ಸ್) ಮಾಹಿತಿಯನ್ನು ನೀಡುವಲ್ಲಿ ವಿಫಲರಾಗಿದ್ದರು. ಅದಕ್ಕಾಗಿ ಅವರನ್ನು ಎರಡು ವರ್ಷ ಅನರ್ಹಗೊಳಿಸಲಾಗಿತ್ತು. ಆ ಶಿಕ್ಷೆಯು ಈ ವರ್ಷದ ಡಿಸೆಂಬರ್ 22ರವರೆಗೆ ಇರಲಿದೆ.

ದೂರ ಅಂತರದ ಓಟಗಾರ ಹರೇಂದ್ರ ಕುಮಾರ್ ಅವರಿಗೂ ನಾಡಾ ನಾಲ್ಕು ವರ್ಷಗಳ ಅಮಾನತು ಶಿಕ್ಷೆ ವಿಧಿಸಿದೆ. ಕಳೆದ ಆಗಸ್ಟ್ 2ರಿಂದ ಇದು ಪೂರ್ವಾನ್ವಯವಾಗಲಿದೆ. ಅವರು ದಾರ್ಬೆಪೊಯಿಟಿನ್ (ಡಿಇಪಿಒ) ಸೇವನೆ ಮಾಡಿದ್ದು ಪರೀಕ್ಷೆಯಲ್ಲಿ ಸಾಬೀತಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.