ಬಸವಕಲ್ಯಾಣ: ನಗರದ ತೇರು ಮೈದಾನದಲ್ಲಿ ಬುಧವಾರ ಬಸವೇಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಅನೇಕರು ಪಾಲ್ಗೊಂಡಿದ್ದರು. ಆಳಂದ ತಾಲ್ಲೂಕಿನ ಬೆಳಮಗಿಯ ಅಂಬರೀಶ ಬೆಳಮಗಿ ಕೊನೆಯ ಕುಸ್ತಿಯಲ್ಲಿ ವಿಜೇತರಾಗಿ ₹51 ಸಾವಿರ ನಗದು ಬಹುಮಾನ ಪಡೆದರು.

ಇವರು ಮಹಾರಾಷ್ಟ್ರದ ಮುದಗಡನ ಭೈಯಾ ಮಾಳಿ ಅವರೊಂದಿಗೆ ಸೆಣಸಾಡಿದರು. ಇದಕ್ಕೂ ಮೊದಲು ನಡೆದ ಕುಸ್ತಿಯಲ್ಲಿ ಸಿದ್ದು ಬೆಳಮಗಿ, ದತ್ತು ಕೊಲ್ಲಾಪುರ, ಶಿವಶರಣ ಉದಗೀರ್ ಹಾಗೂ ಮತ್ತಿತರರು ಬಹುಮಾನ ಗೆದ್ದರು. 97 ಜೋಡಿ ಕುಸ್ತಿಗಳು ನಡೆದವು. ₹10 ಸಾವಿರದಿಂದ ₹51 ಸಾವಿರದವರೆಗೆ ಬಹುಮಾನ ನೀಡಲಾಯಿತು.

ಹೆಚ್ಚಿನವರು ₹1 ಸಾವಿರದಿಂದ ₹5 ಸಾವಿರದವರೆಗಿನ ಬಹುಮಾನ ಪಡೆದರು.

ಉತ್ತಮ ಪೈಲ್ವಾನರು ಬಂದಿದ್ದರಿಂದ ಕೆಲವರು ಅರ್ಧ ಗಂಟೆವರೆಗೂ ಸೆಣಸಾಡಿದರೂ ಯಾರೂ ಸೋಲದಾದರು. ಆದ್ದರಿಂದ ಇಂಥ 12 ಜೋಡಿ ಕುಸ್ತಿಯವರಿಗೆ ಬಹುಮಾನದ ಹಣವನ್ನು ಸಮನಾಗಿ ಹಂಚಿಕೊಡಲಾಯಿತು. ಗದ್ಲೇಗಾಂವ, ಹಾರಕೂಡ, ಮುಡಬಿ, ಬೆಳಮಗಿ, ಮುದಗಡ, ತ್ರಿಪುರಾಂತ, ಉಸ್ತೂರಿ, ಹಿಪ್ಪರ್ಗಾ ಗ್ರಾಮಗಳ ಅನೇಕ ಪೈಲ್ವಾನರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಮಿತಿ ನಿರ್ದೇಶಕ ಈರಣ್ಣ ಹಲಶೆಟ್ಟೆ ಮಾತನಾಡಿ,‘ಕ್ರೀಡೆಗಳಲ್ಲಿ ಪಾಲ್ಗೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಇದಲ್ಲದೆ ಯುವಕರಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವುದು ಸಹ ಅಗತ್ಯವಾಗಿದೆ. ಆದ್ದರಿಂದ ಜಾತ್ರೆಯಲ್ಲಿ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗುತ್ತದೆ’ ಎಂದರು.

ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ ಮಾತನಾಡಿ,‘ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ ಉದ್ಘಾಟಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ನಾಗಯ್ಯ ಸ್ವಾಮಿ, ಜಗನ್ನಾಥ ಖೂಬಾ, ಬಸವರಾಜ ಬಾಲಿಕಿಲೆ, ವಿವೇಕಾನಂದ ಹೊದಲೂರೆ, ವಿಠಲ್ ಹೂಗಾರ, ಶರಣು ದುರ್ಗೆ ಹಾಗೂ ಅಶೋಕ ಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-33-1758341824

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.