ಬೆಂಗಳೂರು: ಸಂಘಟಿತ ಆಟವಾಡಿದ ಕರ್ನಾಟಕ ಬಾಲಕಿಯರ ತಂಡವು ಪುದುಚೆರಿಯಲ್ಲಿ ನಡೆಯುತ್ತಿರುವ 76ನೇ ಜೂನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಎ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಸೋಮವಾರ 74–47ರಿಂದ ಹರಿಯಾಣ ವಿರುದ್ಧ ಜಯ ಸಾಧಿಸಿತು. ಅದರೊಂದಿಗೆ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿತು.

ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರಾವಣಿ ಶಿವಣ್ಣ 19 ಅಂಕ ಗಳಿಸಿದರೆ, ಅವರಿಗೆ ನಿಧಿ ಉಮೇಶ್ (17 ಅಂಕ) ಹಾಗೂ ನಿಲಾಯ ರೆಡ್ಡಿ (15 ಅಂಕ) ಉತ್ತಮ ಸಾಥ್ ನೀಡಿದರು. ಹರಿಯಾಣ ತಂಡದ ಅಂಶಿಕಾ ಜೈನ್ (14 ಅಂಕ) ಹೋರಾಟ ತೋರಿದರು.

ರಾಜ್ಯ ಬಾಲಕಿಯರ ತಂಡವು ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ 89–62ರಿಂದ ಹಾಲಿ ಚಾಂಪಿಯನ್ ತಮಿಳುನಾಡು ತಂಡವನ್ನು ಪರಾಭವಗೊಳಿಸಿತ್ತು.

ಆದರೆ, ಈಗಾಗಲೇ ಎಂಟರ ಘಟ್ಟ ತಲುಪಿರುವ ರಾಜ್ಯ ಬಾಲಕರ ತಂಡವು ಬಿ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ 68–94ರಿಂದ ಹರಿಯಾಣ ವಿರುದ್ಧ ಸೋಲನುಭವಿಸಿತು. ಹರಿಯಾಣ ತಂಡದ ಅಜಯ್ (36 ಅಂಕ), ಮಯಾಂಕ್ (24 ಅಂಕ) ಹಾಗೂ ರಾಹುಲ್ (21 ಅಂಕ) ಅಮೋಘ ಆಟವಾಡಿದರು. ರಾಜ್ಯ ತಂಡದ ಆದಿತ್ಯ ವಿಠ್ಠಲ ಶೆಣೈ ಹಾಗೂ ವೈಭವ್ ಗೌಡ ತಲಾ 12 ಅಂಕ ಗಳಿಸಿ, ಹೋರಾಟ ತೋರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-4-1452933971

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.