ಬೆಂಗಳೂರು: ಎಂಎನ್ಕೆ ರಾವ್ ಪಾರ್ಕ್ ಬಿ.ಸಿ ಬಾಲಕರ ತಂಡವು ಡಿ.ಎನ್.ರಾಜಣ್ಣ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ ಬಾಲಕ ಮತ್ತು ಬಾಲಕಿಯರ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಫೈನಲ್ ಪ್ರವೇಶಿಸಿತು. ಪ್ರಶಸ್ತಿಗಾಗಿ ಶನಿವಾರ ಬೀಗಲ್ಸ್ ಬಿ.ಸಿ ವಿರುದ್ಧ ಸೆಣಸಲಿದೆ.

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಶುಕ್ರವಾರ ನಡೆದ ಫೈನಲ್ ಲೀಗ್ ಕಮ್ ನಾಕೌಟ್ ಪಂದ್ಯದಲ್ಲಿ ಎಂಎನ್ಕೆ ರಾವ್ ತಂಡವು 81–65ರಿಂದ ಪಿಪಿಸಿ ತಂಡವನ್ನು ಮಣಿಸಿತು. ಎಎನ್ಕೆ ಪರ ಆಕಾಶ್ 24 ಮತ್ತು ವಿಜಯೇಂದ್ರ 19 ಅಂಕ ಗಳಿಸಿದರು. ಪಿಪಿಸಿ ಪರ ರಯಾನ್ ಜೋಸೆಫ್ 22, ಆದಿತ್ಯ 19 ಪಾಯಿಂಟ್ಸ್ ಕಲೆ ಹಾಕಿದರು.

ಮತ್ತೊಂದು ಪಂದ್ಯದಲ್ಲಿ ಎಚ್ಬಿಆರ್ ಬಿಸಿ ತಂಡವು 70–61ರಿಂದ ವಿವೇಕ್ಸ್ ಎಸ್.ಸಿ ತಂಡವನ್ನು ಸೋಲಿಸಿತು. ಎಚ್ಬಿಆರ್ ಪರ ರಿಶಿತ್ (19), ಸಿದ್ಧಾರ್ಥ್ (16) ಮಿಂಚಿದರು. ವಿವೇಕ್ಸ್ ಪರ ಅನ್ಶುಲ್ 23 ಅಂಕ ಗಳಿಸಿದರು.

ಬಾಲಕಿಯರ ವಿಭಾಗದ ರೌಂಡ್ ರಾಬಿನ್ ಲೀಗ್ ಪಂದ್ಯಗಳಲ್ಲಿ ಬೆಂಗಳೂರು ವ್ಯಾನ್ಗಾರ್ಡ್ಸ್ 67–54ರಿಂದ ಬೀಗಲ್ಸ್ ಬಿ.ಸಿ ವಿರುದ್ಧ; ಡಿವೈಇಎಸ್ ವಿದ್ಯಾನಗರ ತಂಡವು 71–37ರಿಂದ ವಿವೇಕ್ಸ್ ಎಸ್.ಸಿ ವಿರುದ್ಧ; ಡಿವೈಇಎಸ್ ವಿದ್ಯಾನಗರ 76–34ರಿಂದ ಮಂಡ್ಯ ಜಿಲ್ಲೆ ವಿರುದ್ಧ; ಬೆಂಗಳೂರು ವ್ಯಾನ್ಗಾರ್ಡ್ಸ್ 73–53ರಿಂದ ವಿವೇಕ್ಸ್ ಎಸ್ಸಿ ವಿರುದ್ಧ ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.