ಬೆಂಗಳೂರು: ಬೀಗಲ್ಸ್ ಬಿ.ಸಿ ಮತ್ತು ಪಿ.ಪಿ.ಸಿ ತಂಡಗಳು ರಾಜ್ಯ ಯೂತ್ (16 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಸೆಮಿಫೈನಲ್ ಲೀಗ್‌ನ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದವು.
ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಅಂಕಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬೀಗಲ್ಸ್ ತಂಡವು 66–62ರಿಂದ ಬಿ.ಸಿ.ಬಿ.ಸಿ. ತಂಡವನ್ನು ಸೋಲಿಸಿದರೆ, ಪಿ.ಪಿ.ಸಿ. ತಂಡವು 79–47ರಿಂದ ಮೈಸೂರು ಜಿಲ್ಲಾ ತಂಡವನ್ನು ಮಣಿಸಿತು.
ಬಾಲಕಿಯರ ವಿಭಾಗದ ಸೆಮಿಫೈನಲ್ ಲೀಗ್‌ನ ಮೊದಲ ಪಂದ್ಯದಲ್ಲಿ ಮೌಂಟ್ಸ್ ಕ್ಲಬ್ ತಂಡವು 73–45ರಿಂದ ಯಂಗ್ ಓರಿಯನ್ಸ್ ಎಸ್.ಸಿ ತಂಡವನ್ನು; ಮತ್ತೊಂದು ಪಂದ್ಯದಲ್ಲಿ ಮೈಸೂರು ಜಿಲ್ಲಾ ‘ಎ’ ತಂಡವು 63–54ರಿಂದ ಬೀಗಲ್ಸ್ ಬಿ.ಸಿ ತಂಡವನ್ನು ಸೋಲಿಸಿತು.
ಸೆಮಿಫೈನಲ್ ಲೀಗ್‌ನ ಎರಡನೇ ಸುತ್ತಿನ ಪಂದ್ಯಗಳು ಮತ್ತು ಫೈನಲ್ ಹಣಾಹಣಿ ಮಂಗಳವಾರ ನಡೆಯಲಿದೆ.