ಬೆಂಗಳೂರು: ಏಷ್ಯನ್ ಕ್ರೀಡೆಗಳು ಮತ್ತು ಕಾಮನ್ವೆಲ್ತ್ ಕ್ರೀಡೆಗಳ ಅರ್ಹತಾ ಮಾನದಂಡದ ಮೇಲೆ ಕಣ್ಣಿಟ್ಟಿರುವ ಲಾಂಗ್ಜಂಪ್ ಸ್ಪರ್ಧಿಗಳಾದ ಮುರಳಿ ಶ್ರೀಶಂಕರ್ ಮತ್ತು ಶೈಲಿ ಸಿಂಗ್ ಅವರು ಶನಿವಾರ ಇಲ್ಲಿ ನಡೆಯಲಿರುವ ಇಂಡಿಯನ್ ಅಥ್ಲೆಟಿಕ್ಸ್ ಸರಣಿಯ ಮೊದಲ ಕೂಟದಲ್ಲಿ ಭಾಗವಹಿಸುವ ಮೂಲಕ ಋತುವನ್ನು ಆರಂಭಿಸಲಿದ್ದಾರೆ.

ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಒಂದು ದಿನದ ಈ ಕೂಟದಲ್ಲಿ ಜಿಗಿತದ (ಜಂಪ್) ಸ್ಪರ್ಧೆಗಳ ಮೇಲೆ ಕುತೂಹಲವಿದೆ. ಇಲ್ಲಿ ಈ ಹಿಂದೆ ಜಿಗಿತದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆಗಳು ದಾಖಲಾಗಿವೆ. ಈ ಹಿಂದೆ ರಾಷ್ಟ್ರೀಯ ದಾಖಲೆ ಹೊಂದಿದ್ದ ಶ್ರೀಶಂಕರ್ ಅವರು ಇಂಡಿಯನ್ ಓಪನ್ ಜಂಪ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿರಲಿಲ್ಲ. ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾದ 8.41 ಮೀ. ದೂರವು 2023ರಲ್ಲಿ ದಾಖಲಾಗಿತ್ತು.

ಅವರಿಗೆ ಇಂಡಿಯನ್ ಓಪನ್ನಲ್ಲಿ ಜಯಶಾಲಿಯಾಗಿದ್ದ ಕರ್ನಾಟಕ ಯುವತಾರೆ ಪುರುಷೋತ್ತಮ್ (ವೈಯಕ್ತಿಕ ಶ್ರೇಷ್ಠ ಸಾಧನೆ: 7.87 ಮೀ.) ಅವರಿಂದ ಪೈಪೋಟಿ ಎದುರಾಗಬಹುದು. ಭುವನೇಶ್ವರದಲ್ಲಿಕಳೆದ ತಿಂಗಳು ನಡೆದ ರಾಷ್ಟ್ರೀಯ ಒಳಾಂಗಣ ಸ್ಪರ್ಧೆಯಲ್ಲಿ ಜಯಶಾಲಿ ಯಾಗಿದ್ದ ಒಡಿಶಾದ ಸರುನ್ ಪಯಸಿಂಗ್ ಅವರೂ ತಮ್ಮ (7.81 ಮೀ.) ವೈಯಕ್ತಿಕ ಶ್ರೇಷ್ಠ ಸಾಧನೆ ಉತ್ತಮಪಡಿಸಲು ಶ್ರಮ ಹಾಕಬಹುದು.

ಆದರೆ ಮಹಿಳೆಯರ ವಿಭಾಗದ ಫೈನಲ್ ಹೆಚ್ಚು ಪೈಪೋಟಿ ಕಾಣಬಹುದು. ಇಲ್ಲಿ ಶೈಲಿ ಸಿಂಗ್ ಅವರಿಗೆ ಏಷ್ಯನ್ ಕ್ರೀಡೆಗಳ ಬೆಳ್ಳಿ ಪದಕ ವಿಜೇತೆ ಆ್ಯನ್ಸಿ ಸೋಜನ್ ಅವರಿಂದ ತುರುಸಿನ ಸ್ಪರ್ಧೆ ಎದುರಾಗಬಹುದು. ಫೆಬ್ರುವರಿಯಲ್ಲಿ ಏಷ್ಯನ್ ಒಳಾಂಗಣ ಕೂಟದಲ್ಲಿ ಆ್ಯನ್ಸಿ ಬೆಳ್ಳಿ ಜಯಿಸಿದ ನಂತರ ಇತರ ಕೂಟಗಳಲ್ಲಿ ಭಾಗವಹಿಸಿರಲಿಲ್ಲ.

ಶೈಲಿ ಜೊತೆಯಲ್ಲೇ ಕೆಂಗೇರಿಯಲ್ಲಿ ರಾಬರ್ಟ್ ಬಾಬಿ ಜಾರ್ಜ್ ಅವರಿಂದ ತರಬೇತಿ ಪಡೆಯುತ್ತಿರುವ ಮುಬಾಸಿನಾ ಮೊಹಮ್ಮದ್ ಸಹ ತಮ್ಮ ವೈಯಕ್ತಿಕ ಶ್ರೇಷ್ಠ ನಿರ್ವಹಣೆ (6.38 ಮೀ.) ಉತ್ತಮ ಪಡಿಸಲು ಯತ್ನಿಸಲಿದ್ದಾರೆ.

ಈ ಕೂಟ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟುಗಳಿಗೆ ಹಲವು ದೃಷ್ಟಿಯಿಂದ ಮಹತ್ವದ್ದು. ಅಂತರರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಳ್ಳಲು ಬಯಸುವ ಅಥ್ಲೀಟುಗಳು ಅರ್ಹತಾ ಮಟ್ಟ ಸಾಧಿಸಿದರಷ್ಟೇ ಸಾಲದು. ಕಡೇಪಕ್ಷ ಒಂದು ರಾಜ್ಯದ ಕೂಟದಲ್ಲಿ ಮತ್ತು ಎರಡು ರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಭಾಗವಹಿಸಿದರಷ್ಟೇ, ಅಂಥ ಅಥ್ಲೀಟುಗಳು ಮೇ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಫೆಡರೇಷನ್ ಸ್ಪರ್ಧೆಯಲ್ಲಿ (ರಾಂಚಿ) ಮತ್ತು ಜೂನ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ (ಭುವನೇಶ್ವರ) ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡೆಗಳಿಗೆ ಅರ್ಹತೆ ಗಳಿಸಲು ಈ ನಾಲ್ಕು ದಿನಗಳ ಎರಡು ಕೂಟಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ.

ಪುರುಷರ 100 ಮೀ. ಓಟವೂ ಗಮನ ಸೆಳೆಯುವ ನಿರೀಕ್ಷೆಯಿದೆ. ಕರ್ನಾಟಕದ ಮಣಿಕಂಠ ಹೋಬಳಿದಾರ ಅವರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಇದು ಸದವಕಾಶ. ಅವರು ಏಷ್ಯನ್ ಒಳಾಂಗಣ ಕೂಟ ಸೇರಿದಂತೆ ತಮ್ಮ ಕೊನೆಯ ಎರಡು ಸ್ಪರ್ಧೆಗಳಲ್ಲಿ ಅನರ್ಹಗೊಂಡಿದ್ದರು. ಗುರಿಂದರ್ವೀರ್ ಸಿಂಗ್ ಅವರು ಎರಡು ರಾಷ್ಟ್ರೀಯ ದಾಖಲೆಗಳನ್ನು ಸ್ಥಾಪಿಸಿದ್ದು ಉತ್ತಮ ಮನೋಬಲದೊಡನೆ ಕಣದಲ್ಲಿ ದ್ದಾರೆ. ಒಳಾಂಗಣ ಚಾಂಪಿಯನ್ಷಿಪ್ನಲ್ಲಿ ಅವರು 60 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು. 4x100 ಮೀ. ಮಿಶ್ರ ರಿಲೆಯಲ್ಲೂ ಅವರು ಉತ್ತಮ ಓಟ ಓಡಿದ್ದರು.

ಪುರುಷರ 800 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಮೊಹಮ್ಮದ್ ಅಫ್ಸಲ್, ಮಹಿಳೆಯರ 800 ಮೀ. ಓಟದಲ್ಲಿ ಏಷ್ಯನ್ ಚಾಂಪಿಯನ್ಷಿಪ್ನ ಬೆಳ್ಳಿ ವಿಜೇತೆ ಪೂಜಾ ಅವರು ಕಣಕ್ಕಿಳಿಯುವ ಪ್ರಮುಖ ಅಥ್ಲೀಟುಗಳಾಗಿದ್ದಾರೆ.

ಕಳೆದ ತಿಂಗಳು ರಾಷ್ಟ್ರೀಯ ಒಳಾಂಗಣ ಕೂಟದ ಪೋಲ್ವಾಲ್ಟ್ನಲ್ಲಿ 4.22 ಮೀ. ಎತ್ತರ ಜಿಗಿದು ರಾಷ್ಟ್ರೀಯ ದಾಖಲೆ ಸ್ಥಾಪಿಸಿರುವ ಭರಣಿಕಾ ಇಳಂಗೋವನ್ ಅವರೂ ಹೊರಾಂಗಣ ಕೂಟಕ್ಕೆ ಮರಳಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-51-1264028833

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.