ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಶಾಂತ್ ಜೆ. ನಾಯಕ್ ಅವರು ಭಾನುವಾರ ನಗರದಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ಅಮೆಚೂರ್ (2000 ರೇಟಿಂಗ್ ಒಳಗಿನವರ) ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಕಾಟಂನಲ್ಲೂರಿನ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಈ ಮೂರು ದಿನಗಳ ಕೂಟದಲ್ಲಿ ಅವರು 9 ಸುತ್ತುಗಳಿಂದ 8 ಪಾಯಿಂಟ್ಸ್ ಕಲೆಹಾಕಿದರು. ಬೆಂಗಳೂರಿನ ವಿಧು ತೋಟ ಮತ್ತು ದಕ್ಷಿಣ ಕನ್ನಡದ ಆಟಗಾರ್ತಿ ಆರುಷಿ ಹೆಲೆನ್ ಡಿಸಿಲ್ವ ಸಹ 8 ಪಾಯಿಂಟ್ಸ್ ಕಲೆಹಾಕಿದರೂ ಟೈಬ್ರೇಕ್ ಆಧಾರದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಬೆಂಗಳೂರಿನ ಇಂದ್ರಜಿತ್ ಮಜುಂದಾರ್ ಮತ್ತು ದಿಗ್ವಿಜಯ್ ಸುನೀಲ್ (ತಲಾ 7.5) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು.

ಬೆಂಗಳೂರು ಗ್ರಾಮೀಣ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಟೂರ್ನಿಯಲ್ಲಿ 457 ಮಂದಿ ಭಾಗವಹಿಸಿದ್ದು 246 ಮಂದಿ ರೇಟಿಂಗ್ ಪಡೆದಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-4-839198494

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.