ಬೆಂಗಳೂರು: ನಗರದ ಚೆಸ್ ಪ್ರತಿಭೆ ಅಪಾರ್ ಸಕ್ಸೇನಾ, ಕರ್ನಾಟಕದ ಅತಿ ಕಿರಿಯ ಇಂಟರ್ ನ್ಯಾಷನಲ್ ಮಾಸ್ಟರ್ ಎನಿಸಿದ್ದಾನೆ. ಇದಕ್ಕೆ ಅಗತ್ಯವಿರುವ ಮೂರು ಐಎಂ ನಾರ್ಮ್ ಮತ್ತು ರೇಟಿಂಗ್ಅನ್ನು ಅಪಾರ್ ಕೇವಲ ಐದು ವಾರಗಳ ಅಂತರದಲ್ಲಿ ಪೂರೈಸಿದ್ದಾನೆ.

ಮಾರ್ಚ್ 30ರಂದು ಬೋಸ್ನಿಯಾದಲ್ಲಿ ಮುಕ್ತಾಯಗೊಂಡ ರಿನೋಮ್ ಟೂರ್ನಿಯಲ್ಲಿ ಮೊದಲ ನಾರ್ಮ್ ಗಳಿಸಿದ್ದನು. ಆ ಟೂರ್ನಿಯಲ್ಲಿ 9 ಸುತ್ತುಗಳಿಂದ 7 ಪಾಯಿಂಟ್ಸ್ ಗಳಿಸಿ ಪ್ರಶಸ್ತಿ ಜಯಿಸಿದ್ದ. ವಾರದ ನಂತರ ಸ್ಪೇನ್ನ ಸ್ಯಾನ್ ವಿಸೆಂಟ್ ಓಪನ್ ಟೂರ್ನಿಯಲ್ಲೂ 9 ಸುತ್ತುಗಳಿಂದ 7 ಪಾಯಿಂಟ್ಸ್ ಗಳಿಸಿ ಎರಡನೇ ನಾರ್ಮ್ ಗಳಿಸಿದ್ದನು. ಅಲ್ಲಿ 12ನೇ ಸ್ಥಾನ ಪಡೆದಿದ್ದ. 54 ದೇಶಗಳ 520 ಮಂದಿ ಅಲ್ಲಿ ಆಡಿದ್ದನು.

ಸ್ಪೇನ್ನ ಮೆನೊರ್ಕಾದಲ್ಲಿ ನಡೆದ ಟೂರ್ನಿಯಲ್ಲೂ ಉತ್ತಮ ಸಾಧನೆ ತೋರಿದ ಅಪಾರ್ 44 ರೇಟಿಂಗ್ ಪಾಯಿಂಟ್ಸ್ ಸಂಗ್ರಹಿಸಿದ್ದ. ಸದ್ಯ 2450ರ ಲೈವ್ ರೇಟಿಂಗ್ ಹೊಂದಿದ್ದಾನೆ. ಅಪಾರ್, ಸಿಲಿಕಾನ್ ಸಿಟಿ ಅಕಾಡೆಮಿ ಆಫ್ ಸೆಕೆಂಡರಿ ಎಜುಕೇಷನ್ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-1874317069

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.