ಬೆಂಗಳೂರು: ಕಾರ್ತಿಕ್ ಹಾಗೂ ಸಂದೀಪ್ ಅವರು ಗಳಿಸಿದ ತಲಾ ಎರಡು ಗೋಲುಗಳ ನೆರವಿನಿಂದ ಗುರು ಹಾಕಿ ಕ್ಲಬ್ ತಂಡವು ಕೆಎಎಸ್ಎಚ್ಎ ಎ ಡಿವಿಷನ್ ಹಾಕಿ ಲೀಗ್ ಪಂದ್ಯದಲ್ಲಿ ಸೋಮವಾರ 4–2ರಿಂದ ರೇಂಜರ್ಸ್ ಹಾಕಿ ಕ್ಲಬ್ ತಂಡದ ವಿರುದ್ಧ ಜಯಿಸಿತು.

ಶಾಂತಿನಗರದ ಹಾಕಿ ಕ್ರೀಡಾಂಗಣ ದಲ್ಲಿ ನಡೆದ ಪಂದ್ಯದಲ್ಲಿ ರೇಂಜರ್ಸ್ ತಂಡದ ಅರವಿಂದ್ ರಾಜ್ ಅವರು ಎರಡನೇ ನಿಮಿಷದಲ್ಲಿ ಗೋಲು ಗಳಿಸಿ, ತಮ್ಮ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಗುರು ಕ್ಲಬ್ ತಂಡದ ಕಾರ್ತಿಕ್ 9ನೇ ನಿಮಿಷದಲ್ಲಿ ಗೋಲು ಹೊಡೆದು ಸಮಬಲ ಸಾಧಿಸಿದರು. 15ನೇ ನಿಮಿಷದಲ್ಲಿ ಗೋಲು ಹೊಡೆದ ಸಂದೀಪ್ 2–1 ಮುನ್ನಡೆ ಒದಗಿಸಿದರು.

ಕಾರ್ತಿಕ್ (18ನೇ ನಿ.) ಮತ್ತು ಸಂದೀಪ್ (45ನೇ ನಿ.) ಜೋಡಿ ಮತ್ತೆರಡು ಗೋಲು ಗಳಿಸಿ ಪಾರಮ್ಯ ಮೆರೆಯಿತು. ರೇಂಜರ್ಸ್ ತಂಡದ ಅರವಿಂದ್ (34ನೇ ನಿ.) ಅವರ ಪ್ರಯತ್ನವು ಸೋಲಿನ ಅಂತರ ತಗ್ಗಿಸಲಷ್ಟೇ ನೆರವಾಯಿತು.

ಸಂಘಟಿತ ಪ್ರದರ್ಶನ ತೋರಿದ ಬಾಂಬರ್ಸ್ ಹಾಕಿ ಕ್ಲಬ್ ತಂಡವು ದಿನದ ಇನ್ನೊಂದು ಪಂದ್ಯದಲ್ಲಿ 6–0ಯಿಂದ ಏಕಪಕ್ಷೀಯವಾಗಿ ಕೂರ್ಗ್ ಹಾಕಿ ಅಸೋಸಿಯೇಶನ್ ತಂಡವನ್ನು ಸೋಲಿಸಿತು.

ಬಾಂಬರ್ಸ್ ತಂಡದ ಶ್ರೇಯಸ್ (8ನೇ ಹಾಗೂ 16ನೇ ನಿ.) ಮತ್ತು ನಯೀಮುದ್ದೀನ್ (18ನೇ ಹಾಗೂ 30ನೇ ನಿ.) ಅವಳಿ ಗೋಲು ಗಳಿಸಿ ಮಿಂಚಿದರು. ಸಿದ್ಧಾಂತ್ (3ನೇ ನಿ.) ಮತ್ತು ಚೆಂಗಪ್ಪ (6ನೇ ನಿ.) ತಲಾ ಒಂದು ಗೋಲು ಕಾಣಿಕೆ ನೀಡಿದರು.

ಕೂರ್ಗ್ ತಂಡವು ಎದುರಾಳಿ ತಂಡದ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ವಿಫಲವಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-1640302352

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.