ಬೆಂಗಳೂರು: ಸುರೇಶ್ ಅವರು ಗಳಿಸಿದ ನಿರ್ಣಾಯಕ ಗೋಲಿನ ಬಲದಿಂದ ರೇಂಜರ್ಸ್ ಹಾಕಿ ಕ್ಲಬ್ ತಂಡವು ಕೆಎಸ್ಎಚ್ಎ ಎ ಡಿವಿಷನ್ ಲೀಗ್ ಹಾಕಿ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಹಾಸನ ಜಿಲ್ಲಾ ತಂಡದ ಜೊತೆ ಶನಿವಾರ 1–1 ಡ್ರಾ ಸಾಧಿಸಿತು.

ಶಾಂತಿನಗರದ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಸನ ಜಿಲ್ಲಾ ತಂಡದ ಅಗಸ್ಟಿನ್ ಮಾರ್ಟಿನ್ 15ನೇ ನಿಮಿಷದಲ್ಲಿ ಗೋಲು ಹೊಡೆದು, ತಮ್ಮ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ರೇಂಜರ್ಸ್ ತಂಡದ ಸುರೇಶ್ (22ನೇ ನಿ.) ಗೋಲು ಗಳಿಸಿ, 1–1 ಸಮಬಲ ತಂದುಕೊಟ್ಟರು. ಎರಡನೇ ಅವಧಿಯಲ್ಲಿ ಗೋಲು ದಾಖಲಾಗದ ಕಾರಣ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-4-439079543

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.