ಬೆಂಗಳೂರು: ಸುಮಿಯಾ ಶೇಕ್ ಅವರು ಗಳಿಸಿದ ಐದು ಗೋಲುಗಳ ನೆರವಿನಿಂದ ಮಡಿಕೇರಿಯ ‘ಸಾಯ್’ ತರಬೇತಿ ಕೇಂದ್ರ (ಎಸ್ಟಿಸಿ) ತಂಡವು ಸೋಮವಾರ ಆರಂಭಗೊಂಡ ‘ಹಾಕಿ ಕರ್ನಾಟಕ’ ರಾಜ್ಯ 16 ವರ್ಷದೊಳಗಿನ ಬಾಲಕಿಯರ ಟೂರ್ನಿಯಲ್ಲಿ 13–0ಯಿಂದ ಕೆಜಿಎಫ್ನ ಎವರ್ಗ್ರೀನ್ ಸ್ಪೋರ್ಟ್ಸ್ ಅಕಾಡೆಮಿ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿತು.

ಶಾಂತಿನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಸ್ಟಿಸಿ ತಂಡವು ಆರಂಭದಿಂದಲೇ ಗೋಲುಗಳ ಮಳೆಗರೆಯಿತು. ಸುಮಿಯಾ (3ನೇ, 4ನೇ, 6ನೇ, 8ನೇ ಹಾಗೂ 34ನೇ ನಿ.) ಐದು ಗೋಲುಗಳ ಸಾಧನೆ ಮಾಡಿದರು.

ಸಬಿತಾ ಎ. (10ನೇ ಹಾಗೂ 15ನೇ ನಿ.) ಮತ್ತು ನಾಗಮಣಿ ಆರ್. (17ನೇ ಹಾಗೂ 37ನೇ ನಿ.) ತಲಾ ಎರಡು ಗೋಲು ಗಳಿಸಿದರೆ, ಗ್ರೀಷ್ಮಾ ಪೊನ್ನಪ್ಪ (14ನೇ ನಿ.), ಶ್ರುತಿ ಬೋಯಾ (29ನೇ ನಿ.), ಜ್ಞಾನೇಶ್ವರಿ ಜಿ. (30ನೇ ನಿ.) ಹಾಗೂ ನೀಲಮ್ಮ ಎನ್.ಆರ್. (40ನೇ ನಿ.) ತಲಾ ಒಂದು ಗೋಲಿನ ಕಾಣಿಕೆ ನೀಡಿದರು. ಎವರ್ಗ್ರೀನ್ ತಂಡದ ಆಟಗಾರ್ತಿಯರು ಎದುರಾಳಿ ತಂಡದ ರಕ್ಷಣಾ ವ್ಯವಸ್ಥೆಯನ್ನು ಭೇದಿಸುವಲ್ಲಿ ವಿಫಲರಾದರು.

ದಿನದ ಇನ್ನೊಂದು ಪಂದ್ಯದಲ್ಲಿ ಕೆಜಿಎಫ್ನ ಸೇಂಟ್ ತೆರೆಸಾ ಶಿಕ್ಷಣ ಸಂಸ್ಥೆ ತಂಡವು 1–0ಯಿಂದ ಬೆಂಗಳೂರು ಬ್ಲ್ಯೂಸ್ ಹಾಕಿ ಕ್ಲಬ್ ತಂಡದ ವಿರುದ್ಧ ಜಯಿಸಿತು. ಡ್ರಾದತ್ತ ಸಾಗುತ್ತಿದ್ದ ಈ ಪಂದ್ಯದಲ್ಲಿ ತೆರೆಸಾ ತಂಡದ ಬಿಂದುಶ್ರೀ ಪಿ. (35ನೇ ನಿ.) ನಿರ್ಣಾಯಕ ಗೋಲು ಗಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-4-16854746

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.