ಬೆಂಗಳೂರು: ರಾಜ್ಯ ಅಮೆಚೂರ್ ಚೆಸ್ (2000 ರೇಟಿಂಗ್ ಒಳಗಿನವರ) ಚಾಂಪಿಯನ್ಷಿಪ್ನ ಆರನೇ ಸುತ್ತಿನ ನಂತರ ಐವರು ಆಟಗಾರರು ತಲಾ ಐದೂವರೆ ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಭಾನುವಾರ ಟೂರ್ನಿಯ ಅಂತಿಮ ದಿನವಾಗಿದ್ದು, ಮೂರು ಸುತ್ತುಗಳ ಆಟ ಉಳಿದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನ ಎರಡನೇ ದಿನವಾದ ಶನಿವಾರ ಮೊದಲ ಮೂರು ಬೋರ್ಡ್ನ ಪಂದ್ಯಗಳು ಡ್ರಾ ಆಗಿದ್ದು, ಯುವನೇಶ್, ಇಂದ್ರಜಿತ್ ಮಜುಂದಾರ್, ಆರವ್ ಮಂಚೆ, ಶ್ರೀಕರ ದರ್ಭಾ ಮತ್ತು ಶ್ರೀಸುದಯ್ ಬೆಹರಾ ಅವರು ಮುನ್ನಡೆ ಹಂಚಿಕೊಂಡಿದ್ದಾರೆ.

ಮೊದಲ ಬೋರ್ಡ್ನಲ್ಲಿ ಯುವನೇಶ್ ಮತ್ತು ಇಂದ್ರಜಿತ್ ಡ್ರಾ ಮಾಡಿಕೊಂಡರು. ಆರವ್ ಮತ್ತು ಶ್ರೀಕರ ಸಹ ಡ್ರಾ ಮಾಡಿಕೊಂಡರು. ಒಟ್ಟಾರೆ ಮೊದಲ ಹತ್ತು ಬೋರ್ಡ್ಗಳಲ್ಲಿ ಐದು ಡ್ರಾ ಆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-4-1652347132

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.