ಬೆಂಗಳೂರು: ಹಾಲಿ ಚಾಂಪಿಯನ್, ಉಗಾಂಡಾದ ಸಾರಾ ಚೆಲಂಗತ್ ಅವರು ಭಾನುವಾರ ನಡೆಯಲಿರುವ 18ನೇ ಆವೃತ್ತಿಯ ಟಿಸಿಎಸ್ ವಿಶ್ವ ಟೆನ್ ಕೆ ಓಟದ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. ಅದೇ ದೇಶದ ಹರ್ಬರ್ಟ್ ಕಿಬೆಟ್ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗುವ ವಿಶ್ವಾಸದಲ್ಲಿದ್ದಾರೆ.

‘ಕಳೆದ ಆವೃತ್ತಿಯಲ್ಲಿ ಬೆನ್ನುನೋವಿನ ನಡುವೆಯೂ ಪ್ರಶಸ್ತಿ ಜಯಿಸಿದ್ದೆ. ಈ ಬಾರಿ ಸಂಪೂರ್ಣ ಫಿಟ್ ಆಗಿದ್ದೇನೆ. ಪ್ರಶಸ್ತಿ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದೇನೆ’ ಎಂದು ಸಾರಾ ಅವರು ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಹೇಳಿದರು.

ಸಾರಾ ಅವರು 2023ರ ವೆಲೆನ್ಸಿಯಾ ಟೆನ್ ಕೆ ಓಟವನ್ನು 30.24 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು. ಅದು ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನವೂ ಆಗಿದೆ.

‘ಬಾಲ್ಯದಲ್ಲಿ ಪ್ರತಿದಿನ 10 ಕಿ.ಮೀ. (ಒಂದು ಬದಿ) ನಡೆದು ಶಾಲೆಗೆ ತೆರಳುತ್ತಿದ್ದೆ. ಹೀಗಾಗಿ 10 ಕಿ.ಮೀ. ಓಟಕ್ಕೆ ಸಹಜವಾಗಿ ಒಗ್ಗಿಕೊಂಡಿದ್ದೇನೆ. ಭಾನುವಾರವೂ ಮೊದಲಿಗನಾಗಿ ಓಟ ಪೂರ್ಣಗೊಳಿಸುವ ವಿಶ್ವಾಸವಿದೆ’ ಎಂದು ವಿಶ್ವದ ವೇಗದ ಓಟಗಾರನೂ ಆಗಿರುವ ಕಿಬೆಟ್ ಹೇಳಿದರು.

ಉಗಾಂಡದ ಓಟಗಾರ ಸ್ಪೇನ್ನ ಕ್ಯಾಸ್ಟೆಲ್ಲನ್ನಲ್ಲಿ ಈ ವರ್ಷದ ಫೆಬ್ರುವರಿಯಲ್ಲಿ ನಡೆದ ಟೆನ್ ಕೆ ಓಟವನ್ನು 26 ನಿ. 39 ಸೆ.ಗಳಲ್ಲಿ ಪೂರ್ಣಗೊಳಿಸಿ, ಪ್ರಶಸ್ತಿ ಜಯಿಸಿದ್ದರು. ‘ಟಿಸಿಎಸ್ ಓಟ’ದ ದಾಖಲೆಯು 27 ನಿಮಿಷ 38 ಸೆಕೆಂಡುಗಳು ಇದೆ.

2023ರ ರನ್ನರ್ಸ್ಅಪ್, ಬುರುಂಡಿಯ ರೋಡ್ರಿಗ್ ಕ್ವಿಝೆರಾ ಅವರು ಈ ಬಾರಿ ಚಾಂಪಿಯನ್ ಆಗಲು ಸಕಲ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿತಿಳಿಸಿದರು. ಪ್ರಾಗ್ ಹಾಫ್ ಮ್ಯಾರಾಥಾನ್ನಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಉತ್ಸಾಹದಲ್ಲಿರುವ ಅವರು, ಬೆಂಗಳೂರಿನಲ್ಲೂ ದಾಖಲೆ ನಿರ್ಮಿಸುವ ಗುರಿ ಇದೆ ಎಂದರು.

ಪುರುಷರ ವಿಭಾಗದಲ್ಲಿ ಕಿಬೆಟ್– ಕ್ವಿಝೆರಾ ನಡುವೆ ನಿಕಟ ಪೈಪೋಟಿ ನಿರೀಕ್ಷಿಸಲಾಗಿದೆ. ಜನವರಿಯಲ್ಲಿ ನಡೆದ ವೆಲೆನ್ಸಿಯಾ ಟೆನ್ ಕೆ ಓಟವನ್ನು 29ನಿ. 25 ಸೆ.ಗಳಲ್ಲಿ ಪೂರ್ಣಗೊಳಿಸಿರುವ ಕೆನ್ಯಾದ ಬ್ರೆಂಡಾ ಜೆಪ್ಚಿರ್ಚಿರ್ ಅವರು ಮಹಿಳೆಯರ ವಿಭಾಗದಲ್ಲಿ ಸಾರಾ ಸವಾಲನ್ನು ಮೀರಿ ನಿಲ್ಲುವ ಛಲದಲ್ಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-51-742454775

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.