ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್‌ಎಸ್ ರೆಡ್ಡಿ ಅವರು ಕೆನಡಾದ ವಿನಿಪೆಗ್‌ನಲ್ಲಿ ನಡೆದ ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್ಸ್‌ನ ಟೆನಿಸ್ ಟೂರ್ನಿಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದುಕೊಂಡರು.
ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ರೆಡ್ಡಿ ಹಾಗೂ ಎಸ್.ಎಂ ಶರ್ಮಾ ಜೋಡಿ 6–2, 6–3 ರಿಂದ ಆಸ್ಟ್ರೇಲಿಯಾದ ವಿಕ್ಟರ್ ಬಿಯರ್ಡ್ ಮತ್ತು ಅಮೆರಿಕದ ರಾಬರ್ಟ್ ಶಾಫ್ನೆರ್ ಅವರನ್ನು ಮಣಿಸಿ ಚಾಂಪಿಯನ್ ಆಯಿತು.
ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ರೆಡ್ಡಿ ಅವರು 6–2, 6–1 ರಿಂದ ಅಮೆರಿಕದ ಥಾಮಸ್ ಲೇಕ್ ವಿರುದ್ಧ ಜಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.