ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನದ ಪದಕ ಗೆದ್ದ ಲೆಟ್ಸಿಲೆ ಸ್ವಾಗತಕ್ಕೆ ಬೊಟ್ಸ್‌ವಾನಾದಲ್ಲಿ ಅರ್ಧದಿನ ರಜೆ

ಖ್ಯಾತನಾಮರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದಿರುವ ಓಟಗಾರ
Published 13 ಆಗಸ್ಟ್ 2024, 16:09 IST
Last Updated 13 ಆಗಸ್ಟ್ 2024, 16:09 IST
ಅಕ್ಷರ ಗಾತ್ರ

ಗಬರೊನೆ, ಬೊಟ್ಸ್‌ವಾನಾ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನೆಚ್ಚಿನ ಓಟಗಾರರನ್ನು ಹಿಂದೆಹಾಕಿ 200 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಲೆಟ್ಸಿಲೆ ಟೆಬಾಗೊ ಅವರನ್ನು ಸ್ವಾಗತಿಸಲು ಬೋಟ್ಸ್‌ವಾನಾದಲ್ಲಿ ಮಂಗಳವಾರ ಅರ್ಧದಿನ ರಜೆ ಘೋಷಣೆ ಮಾಡಲಾಗಿತ್ತು.

21 ವರ್ಷ ವಯಸ್ಸಿನ ಟೆಬಾಗೊ ಆಗಸ್ಟ್‌ 8ರಂದು ಅಮೆರಿಕದ ಕೆನ್ನಿ ಬೆಡ್ನಾರೆಕ್ ಮತ್ತು ನೊವಾ ಲೈಲ್ಸ್ ಅವರಂತಹ ಖ್ಯಾತ ಓಟಗಾರರನ್ನು ಹಿಮ್ಮೆಟ್ಟಿಸಿ ಪ್ಯಾರಿಸ್‌ ಕೂಟದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಸ್ಪರ್ಧೆಯಲ್ಲಿ 19.46 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಇದು ಆಫ್ರಿಕಾದ ದಕ್ಷಿಣಭಾಗದ ದೇಶಕ್ಕೆ ಮೊದಲ ಚಿನ್ನವಾಗಿತ್ತು.

ಪ್ಯಾರಿಸ್‌ ಒಲಿಂಪಿಕ್ಸ್‌ನ 200 ಮೀ.ಓಟದ ಸ್ಪರ್ಧೆಯಲ್ಲಿ ಚಿನ್ನದ ಗೆದ್ದು ಈ ವಿಭಾಗದಲ್ಲಿ ದೇಶಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ತಂದುಕೊಟ್ಟ ಲೆಟ್ಸಿಲೆ ಟೆಬಾಗೊ ಸ್ವಾಗತಕ್ಕೆ ಅಲ್ಲಿನ ಜನತೆ ಸಜ್ಜಾಗಿದ್ದರು. ಹೀಗಾಗಿ ಬೋಟ್ಸ್‌ವಾನಾದ ಅಧ್ಯಕ್ಷ ಮೊಕ್‌ಗ್ವಿಟ್ಸಿ ಮಸಿಸಿ ಅವರು ಮಂಗಳವಾರ ಮಧ್ಯಾಹ್ನ ನಂತರ ಅರ್ಧದಿನ ರಜೆ ಘೋಷಣೆ ಮಾಡಿದ್ದರು.

ಬೊಟ್ಸ್‌ವಾನಾದ ಒಲಿಂಪಿಕ್ ತಂಡವು ಮಂಗಳವಾರ ಟೆಬೊಗೊ ಗೆದ್ದ ಚಿನ್ನದ ಜೊತೆಗೆ ಪುರುಷರ 4x400 ಮೀ ರಿಲೆಯಲ್ಲಿ ಬೆಳ್ಳಿ ಪದಕದೊಂದಿಗೆ ಸ್ವದೇಶಕ್ಕೆ ಮರಳಿತ್ತು. ಈ ಎರಡು ಪದಕಗಳೊಂದಿಗೆ ದೇಶ ಗೆದ್ದ  ಒಟ್ಟು ಒಲಿಂಪಿಕ್ ಪದಕಗಳ ನಾಲ್ಕಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT