ಪಟಿಯಾಲ (ಪಿಟಿಐ): ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಕ್ರೀಡಾಕೂಟಕ್ಕಾಗಿ ಇಲ್ಲಿ ಗುರುವಾರ ನಡೆದ ಬಾಕ್ಸರ್ ಗಳ ಆಯ್ಕೆ ಟ್ರಯಲ್ಸ್ನಲ್ಲಿಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರಿನ್ ಅವರು ಆಘಾತಕಾರಿ ಸೋಲು ಅನುಭವಿಸಿ ಹೊರಬಿದ್ದರು.

2022ರ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಮತ್ತು 2023ರ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ನಿಖತ್ ಮಹಿಳೆಯರ 51 ಕೆಜಿ ವಿಭಾಗದ ಸೆಮಿ ಫೈನಲ್ನಲ್ಲಿ 1-4 ಅಂತರದಿಂದ ಸಾಕ್ಷಿ ಚೌಧರಿ ವಿರುದ್ಧ ಪರಾಭವಗೊಂಡರು.

ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟಕ್ಕೆ ಬಾಕ್ಸರ್ಗಳನ್ನು ಆಯ್ಕೆಗೆ ಹಮ್ಮಿಕೊಂಡಿದ್ದ ಕಾರ್ಯಕ್ಷಮತೆ ಶಿಬಿರಕ್ಕೆ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಭಾನುವಾರ ತಡೆಯೊಡ್ಡಿತ್ತು. ಹೀಗಾಗಿ, ಟ್ರಯಲ್ಸ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು. ಇದನ್ನು ಹೆಚ್ಚಿನ ಬಾಕ್ಸರ್ಗಳು ಸ್ವಾಗತಿಸಿದ್ದಾರೆ.

ಈ ಹಿಂದೆ 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸರ್ವೀಸಸ್ ತಂಡದ ಸಾಕ್ಷಿ ಅವರು ಫೈನಲ್ನಲ್ಲಿ ಮಿನಾಕ್ಷಿ ಅವರನ್ನು ಎದುರಿಸಲಿದ್ದಾರೆ. ಮಿನಾಕ್ಷಿ ಅವರು ಮಾಜಿ ವಿಶ್ವ ಚಾಂಪಿಯನ್ ನೀತು ಘಾಂಗ್ಹಾಸ್ ಅವರನ್ನು ಸರ್ವಾನುಮತದ ತೀರ್ಪಿನಿಂದ ಸೋಲಿಸಿದರು.

ಮೂರು ಬಾರಿ ವಿಶ್ವಕಪ್ ಪದಕ ವಿಜೇತ ಹಿತೇಶ್ ಗುಲಿಯಾ (70 ಕೆ.ಜಿ) ಸೆಮಿಫೈನಲ್ನಲ್ಲಿ ಸುಮಿತ್ ವಿರುದ್ಧ ಸೋತಿದ್ದು, ಮತ್ತೊಂದು ಆಘಾತಕಾರಿ ಫಲಿತಾಂಶವಾಗಿದೆ. ಸುಮಿತ್ ಕೂಡ ಟ್ರಯಲ್ಸ್ಗಾಗಿ 75 ಕೆ.ಜಿಯಿಂದ ಈ ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ.

65 ಕೆಜಿ ಮಹಿಳಾ ವಿಭಾಗದ ಸೆಮಿ ಫೈನಲ್ನಲ್ಲಿ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪರ್ವೀನ್ ಹೂಡಾ ಅವರು ಅಂಕುಶಿತಾ ಬೊರೊ ಅವರನ್ನು ಸೋಲಿಸಿದರೆ, ಪೂಜಾ ರಾಣಿ ಅವರು 80 ಕೆಜಿ ವಿಭಾಗದಲ್ಲಿ ನೈನಾ ವಿರುದ್ಧ ಪರಾಭವಗೊಂಡರು.

ಕಳೆದ ತಿಂಗಳು ಮಂಗೋಲಿಯಾ ದಲ್ಲಿ ನಡೆದ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಫೈನಲ್ಗೆ ತಲುಪಿದ ಸಚಿನ್ ಸಿವಾಚ್ (60 ಕೆಜಿ), ಪ್ರೀತಿ ಪವಾರ್ (54 ಕೆಜಿ) ಮತ್ತು ಪ್ರಿಯಾ ಘಂಘಾಸ್ (60 ಕೆಜಿ) ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟ ಎರಡಕ್ಕೂ ಅರ್ಹತೆ ಪಡೆದಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಜಾಸ್ಮಿನ್ ಲಂಬೋರಿಯಾ (57 ಕೆಜಿ) ಮತ್ತು ಅರುಂಧತಿ ಚೌಧರಿ (70 ಕೆಜಿ) ಅವರು ಕಾಮನ್ವೆಲ್ತ್ ಗೇಮ್ಸ್ಗೆ ಟಿಕೆಟ್ ಗಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-4-888186192

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.