ಪಾಫೋಸ್ (ಪಿಟಿಐ): ವಿಶ್ವಕಪ್ ವಿಜೇತೆ ಹಾಗೂ ಸ್ವದೇಶದ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಬುಧವಾರ ಸೋಲಿಸಿದ ಭಾರತದ ವೈಶಾಲಿ ಆರ್. ಅವರು ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಒಂಬತ್ತನೇ ಸುತ್ತಿನ ನಂತರ ಚೀನಾದ ಝು ಜಿನೆರ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ವೈಶಾಲಿ ಮತ್ತು ಜಿನೆರ್ ತಲಾ 5.5 ಅಂಕ ಗಳಿಸಿದ್ದಾರೆ. ಜಿನೆರ್ ಒಂಬತ್ತನೇ ಸುತ್ತಿನಲ್ಲಿ ರಷ್ಯಾದ ಕ್ಯಾತರಿನಾ ಲಾಗ್ನೊ (4.5) ಅವರನ್ನು ಮಣಿಸಿದರು.

ಅನ್ನಾ ಮುಝಿಚುಕ್ (5) ಮತ್ತು ತಾನ್ ಝೊಂಗ್ಇ (3) ನಡುವಣ ಪಂದ್ಯ ಡ್ರಾ ಆಯಿತು. ಕಜಾಕಸ್ತಾನದ ಬಿಬಿಸಾರ ಅಸುನ್ಬಯೇವಾ (5) ಮತ್ತು ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (4) ನಡುವಣ ಆಟವೂ ಡ್ರಾ ಆಯಿತು.

ಓಪನ್ ವಿಭಾಗದಲ್ಲಿ ಉಜ್ಬೇಕಿ ಸ್ತಾನದ ಆಟಗಾರ ಜಾವೊಖಿರ್ ಸಿಂದರೋವ್ (7) ಅವರು ಮುನ್ನಡೆ ಕಾಪಾಡಿಕೊಂಡಿದ್ದಾರೆ. ಅವರು ಜರ್ಮನಿಯ ಬ್ಲೂಬಾಮ್ ಮಥಾಯಿಸ್ (4) ಜೊತೆ ಡ್ರಾ ಮಾಡಿಕೊಂಡರು.ಭಾರತದ ಪ್ರಜ್ಞಾನಂದ (4) ಮತ್ತು ಚೀನಾದ ವೀ ಯಿ (4) ನಡುವಣ ಸೆಣಸಾಟ ಸಹ ಡ್ರಾ ಆಯಿತು. ಆದರೆ ಅಮೆರಿಕದ ಫ್ಯಾಬಿಯಾನೊ ಕರುವಾನ (4.5) ಅವರನ್ನು ಸೋಲಿಸಿದ ಡಚ್ ಆಟಗಾರ ಅನಿಶ್ ಗಿರಿ 5.5 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿ ದರು. ಈ ಹಿಂದಿನ ಸುತ್ತಿನಲ್ಲಿ ಅವರು ಪ್ರಜ್ಞಾನಂದ ವಿರುದ್ಧ ಜಯಗಳಿಸಿದ್ದರು.

ಈ ಟೂರ್ನಿ ಗೆಲ್ಲುವ ಆಟಗಾರ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಹಾಲಿ ಚಾಂಪಿಯನ್ ಡಿ.ಗುಕೇಶ್ ಅವರಿಗೆ ಚಾಲೆಂಜರ್ ಆಗಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-4-1782174327

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.