ಪಾಫೋಸ್ (ಸೈಪ್ರಸ್): ಇನ್ನೂ ಒಂದು ಸುತ್ತು ಉಳಿದಿರುವಂತೆ ಉಜ್ಬೇಕಿಸ್ತಾನದ ಆಟಗಾರ ಜಾವೊಖಿರ್ ಸಿಂದರೋವ್ ಅವರು ಮಂಗಳವಾರ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಆ ಮೂಲಕ ವಿಶ್ವ ಚಾಂಪಿಯನ್ ಗುಕೇಶ್ ಅವರಿಗೆ ಚಾಲೆಂಜರ್ ಆಗುವ ಅರ್ಹತೆ ಸಂಪಾದಿಸಿದರು.

ವಿಶ್ವ ಚೆಸ್ ಪಟ್ಟಕ್ಕೆ ಈ ವರ್ಷದ ಕೊನೆಯಲ್ಲಿ ಸೆಣಸಾಟ ನಡೆಯಲಿದೆ. ಇದರ ತಾಣ, ದಿನಾಂಕ ಅಂತಿಮಗೊಂಡಿಲ್ಲ. ಗುಕೇಶ್ 18ನೇ ವಯಸ್ಸಿನಲ್ಲಿ(2024ರ ಡಿಸೆಂಬರ್) ಅತಿ ಕಿರಿಯ ವಿಶ್ವ ಚಾಂಪಿಯನ್ ಆಗಿದ್ದರು.

ವಿಶ್ವಕಪ್ ಚಾಂಪಿಯನ್ ಸಹ ಆಗಿರುವ ಸಿಂದರೋವ್ 13ನೇ ಸುತ್ತಿನಲ್ಲಿ ನೆದರ್ಲೆಂಡ್ಸ್ ಅನಿಶ್ ಗಿರಿ ಅವರ ಜೊತೆ ಹೋರಾಟ ನಡೆಸಿ 58 ನಡೆಗಳಲ್ಲಿ ಡ್ರಾ ಮಾಡಿಕೊಂಡರು. 20 ವರ್ಷ ವಯಸ್ಸಿನ ಸಿಂದರೋವ್ ಈ ಟೂರ್ನಿಯಲ್ಲಿ ಅಮೋಘ ಪ್ರದರ್ಶನದೊಡನೆ ಅಜೇಯರಾಗಿ ಉಳಿದರು. ಅವರು 6 ಪಂದ್ಯ ಗೆದ್ದು, ಏಳು ಡ್ರಾ ಮಾಡಿಕೊಂಡು ಒಟ್ಟು 9.5 ಅಂಕ ಕಲೆಹಾಕಿದರೆ, ಎರಡನೇ ಸ್ಥಾನದಲ್ಲಿರುವ ಡಚ್ ಗ್ರ್ಯಾಂಡ್ಮಾಸ್ಟರ್ 7.5 ಅಂಕ ಸಂಗ್ರಹಿಸಿದ್ದಾರೆ.

ಅಮೆರಿಕದ ಫ್ಯಾಬಿಯಾನೊ ಕರುವಾನ (6.5) ಮತ್ತು ಭಾರತದ ಪ್ರಜ್ಞಾನಂದ (5.5) ನಡುವಣ ಪಂದ್ಯ 43 ನಡೆಗಳಲ್ಲಿ ಡ್ರಾ ಆಯಿತು. ಪ್ರಜ್ಞಾನಂದ ಕೊನೆಯ ಸುತ್ತಿನಲ್ಲಿ ಅಮೆರಿಕದ ಹಿಕಾರು ನಕಾಮುರ ಅವರನ್ನು ಎದುರಿಸಲಿದ್ದಾರೆ.

ಓಪನ್ ವಿಭಾಗದ ನಾಲ್ಕೂ ಪಂದ್ಯಗಳು ಡ್ರಾ ಆದವು. ಚೀನಾದ ವೀ ಯಿ (6.5) ಮತ್ತು ರಷ್ಯಾದ ಆ್ಯಂಡ್ರಿ ಇಸಿಪೆಂಕೊ (4.5) ನಡುವಣ, ಅಮೆರಿಕದ ಹಿಕಾರು ನಕಾಮುರ (6) ಮತ್ತು ಜರ್ಮನಿಯ ಮಥಾಯಸ್ ಬ್ಲೂಬಾಮ್ (6) ನಡುವಣ ಪಂದ್ಯಗಳೂ ಡ್ರಾ ಆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-51-603844964

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.