ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌: ಮುನ್ನಡೆಯಲ್ಲಿ ಲಿಸೆಂಕೊ ಲುಬೊವ್

Published : 2 ಅಕ್ಟೋಬರ್ 2024, 16:02 IST
Last Updated : 2 ಅಕ್ಟೋಬರ್ 2024, 16:02 IST
ಫಾಲೋ ಮಾಡಿ
Comments

ಬೆಂಗಳೂರು: ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಐಬಿಸಿಎ (ಅಂತರರಾಷ್ಟ್ರೀಯ ಬ್ರೇಲ್‌ ಚೆಸ್‌ ಸಂಸ್ಥೆ) ವಿಶ್ವ ಮಹಿಳೆಯರ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮೆರೆದಿರುವ ಉಕ್ರೇನ್‌ನ ಆಟಗಾರ್ತಿ ಝಿಲ್ಟ್‌ಝೋವಾ ಲಿಸೆಂಕೊ ಲುಬೊವ್‌ ಮತ್ತೊಮ್ಮೆ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. 12ನೇ ಆವೃತ್ತಿಯ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಐದನೇ ಸುತ್ತಿನ ನಂತರ ಗರಿಷ್ಠ ಐದು ಪಾಯಿಂಟ್ ಗಳಿಸಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಅಗ್ರ ಶ್ರೇಯಾಂಕದ ಝಿಲ್ಟ್‌ಝೋವಾ, ಅಮೆರಿಕದ ಲೌಸರ್‌ ಜೆಸಿಕಾ ಅವರನ್ನು 33 ನಡೆಗಳಲ್ಲಿ ಮಣಿಸಿದರು. ಪೋಲೆಂಡ್‌ನ ಟ್ರಿಯಾನ್‌ಸ್ಕಾ ಎಮಿಲಿಯಾ (4 ಪಾಯಿಂಟ್‌) ಎರಡನೇ ಸ್ಥಾನದಲ್ಲಿದ್ದಾರೆ. ಅವರು ಕಜಕಸ್ತಾನದ ಮುರಟೊವಾ ಆಲಿಯಾ (3) ಅವರನ್ನು ಮಣಿಸಿದರು. ಅಮೆರಿಕದ ಇಗೆಮನ್ ಎಮಿಲಿಯಾ ಮತ್ತು ಭಾರತದ ಮೇಘಾ ಚಕ್ರವರ್ತಿ ತಲಾ 3.5 ಪಾಯಿಂಟ್ಸ್ ಸಂಗ್ರಹಿಸಿ ಮೂರನೇ ಸ್ಥಾನ  ಹಂಚಿಕೊಂಡಿದ್ದಾರೆ.

ಮೇಘಾ ಅವರು ವಿಯೆಟ್ನಾಮಿನ ಫಾಮ್‌ ಥಿ ಹುವೊಂಗ್ (2.5) ಅವರನ್ನು ಸೋಲಿಸಿದರೆ, ಇಗೆಮನ್, ಭಾರತದ ಆಯಿಷಾ ಸೈನಾಬ್‌ (2.5) ಮೇಲೆ ಜಯಗಳಿಸಿದರು. ಒಟ್ಟು 20 ಆಟಗಾರ್ತಿಯರು ಕಣದಲ್ಲಿದ್ದಾರೆ.

ಅಂಧರ ವಿಶ್ವ ಜೂನಿಯರ್ ಚೆಸ್‌ನಲ್ಲಿ ಅಗ್ರ ಶ್ರೇಯಾಂಕದ ರೇಸಿಸ್‌ ಮೈಕೆಲ್ ಮತ್ತು ಎರಡನೇ ಶ್ರೇಯಾಂಕದ ಆಟಗಾರ್ತಿ ಸಾಲೊಮನ್ ಜೂಲಿಯಾ (ಇಬ್ಬರೂ ಪೋಲೆಂಡ್‌) ತಲಾ ನಾಲ್ಕು ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಈ ವಿಭಾಗದಲ್ಲಿ 12 ಮಂದಿ ಕಣದಲ್ಲಿದ್ದಾರೆ. ಅಜೇಯರಾಗಿರುವ ಮೈಕೆಲ್‌ ಐದನೇ ಸುತ್ತಿನಲ್ಲಿ ಕಜಕಸ್ತಾನದ ಕುವಾನ್ಶುಲಿ ನುರ್ಗಿಸ (3.5) ಜೊತೆ ಪಾಯಿಂಟ್ ಹಂಚಿಕೊಂಡರು. ಇದು ಹಾಲಿ ಚಾಂಪಿಯನ್‌ಗೆ ಎರಡನೇ ಡ್ರಾ. ಜೂಲಿಯಾ, ಭಾರತದ ಜಾನ್ ಹ್ಯಾರಿಸ್‌ ಸುಜಿನ್ ಜೊತೆ ಡ್ರಾ ಮಾಡಿಕೊಂಡರು. ನುರ್ಗಿಸಾ ಮತ್ತು ಗ್ರಾಡಿಸೆಕ್ ಬೊರ್ (ತಲಾ 3.5) ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT