ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌ ಒಲಿಂಪಿಯಾಡ್‌: ಭಾರತಕ್ಕೆ ಸವಾಲಾಗದ ಐಸ್‌ಲ್ಯಾಂಡ್‌

Published : 13 ಸೆಪ್ಟೆಂಬರ್ 2024, 12:58 IST
Last Updated : 13 ಸೆಪ್ಟೆಂಬರ್ 2024, 12:58 IST
ಫಾಲೋ ಮಾಡಿ
Comments

ಬುಡಾಪೆಸ್ಟ್‌: ಡಿ.ಗುಕೇಶ್‌ ನೇತೃತ್ವದಲ್ಲಿ ಭಾರತದ ಪುರುಷರ ತಂಡ, 45ನೇ ಚೆಸ್‌ ಒಲಿಂಪಿಯಾಡ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಐಸ್‌ಲ್ಯಾಂಡ್‌ ತಂಡವನ್ನು ನಿರೀಕ್ಷೆಯಂತೆ ಗುರುವಾರ 4–0 ಅಂತರದಿಂದ ಸೋಲಿಸಿತು. ಮಹಿಳೆಯರ ತಂಡವೂ 3.5–0.5 ಅಂತರದಿಂದ ಝೆಕ್‌ ರಿಪಬ್ಲಿಕ್ ತಂಡವನ್ನು ಬಗ್ಗುಬಡಿಯಿತು.

ಭಾರತದ ಆಟಗಾರರ ಪೈಕಿ ಪಿ.ಹರಿಕೃಷ್ಣ ಮಾತ್ರ ಹೆಲ್ಜಿ ಗ್ರೇಟರ್ಸನ್ ವಿರುದ್ಧ ಗೆಲುವಿಗಾಗಿ ಹೆಚ್ಚು ಶ್ರಮ ಹಾಕಬೇಕಾಯಿತು. ಗುಕೇಶ್‌, ವಿದಿತ್ ಗುಜರಾತಿ, ಅರ್ಜುನ್ ಇರಿಗೇಶಿ ಗೆಲುವಿಗೆ ಹೆಚ್ಚು ಕಷ್ಟಪಡಲಿಲ್ಲ. ಪ್ರಜ್ಞಾನಂದ ಈ ಪಂದ್ಯಕ್ಕೆ ವಿಶ್ರಾಂತಿ ಪಡೆದರು.

ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಭಾರತ ಮತ್ತೊಮ್ಮೆ ಎದುರಾಳಿಗಳಿಗೆ ಅರ್ಧ ಪಾಯಿಂಟ್‌ ಬಿಟ್ಟುಕೊಟ್ಟಿತು. ಮೊದಲ ಸುತ್ತಿನಲ್ಲಿ ವಂತಿಕಾ ಅಗರವಾಲ್ ಎದುರಾಳಿಗೆ ಅರ್ಧ ಪಾಯಿಂಟ್‌ ಬಿಟ್ಟುಕೊಟ್ಟರೆ, ಈ ಪಂದ್ಯದಲ್ಲಿ ತಾನಿಯಾ ಸಚ್‌ದೇವ್ ಎದುರಾಳಿ ವಿರುದ್ಧ ಡ್ರಾ ಮಾಡಿಕೊಂಡರು. ದಿವ್ಯಾ ದೇಶಮುಖ್, ಹಾರಿಕಾ ಮತ್ತು ವಂತಿಕಾ ತಮ್ಮ ಪಂದ್ಯಗಳಲ್ಲಿ ಜಯಗಳಿಸಿದರು. ವೈಶಾಲಿ ಈ ಪಂದ್ಯದಲ್ಲಿ ಆಡಲಿಲ್ಲ.

2022ರ ಒಲಿಂಪಿಯಾಡ್‌ನಲ್ಲಿ ಭಾರತ ಮಹಿಳಾ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಹಾರಿಕಾ, ವೈಶಾಲಿ, ತಾನಿಯಾ ಆ ತಂಡದಲ್ಲೂ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT