ಬುಕಾರೆಸ್ಟ್ (ಪಿಟಿಐ): ಭಾರತದ ಆರ್.ಪ್ರಜ್ಞಾನಂದ ಅವರು ಸೂಪರ್ ಚೆಸ್ ಕ್ಲಾಸಿಕ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ನೆದರ್ಲೆಂಡ್ಸ್ನ ಜೋರ್ಡೆನ್ ವಾನ್ ಫೊರೀಸ್ಟ್ ಜೊತೆ 35 ನಡೆಗಳಲ್ಲಿ ಡ್ರಾ ಮಾಡಿಕೊಂಡರು. ಭಾನುವಾರದ ಪಂದ್ಯಗಳ ನಂತರ ಜರ್ಮನಿಯ ವಿನ್ಸೆಂಟ್ ಕೀಮರ್ (3 ಅಂಕ) ಮುನ್ನಡೆ ಸಾಧಿಸಿದ್ದಾರೆ.

ಕೀಮರ್ ನಾಲ್ಕನೇ ಸುತ್ತಿನಲ್ಲಿ ಫ್ರಾನ್ಸ್ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ (2) ಅವರನ್ನು 38 ನಡೆಗಳಲ್ಲಿ ಸೋಲಿಸಿದರು. ಪ್ರಜ್ಞಾನಂದ, ವಾನ್ ಫೋರಿಸ್ಟ್, ಅನಿಶ್ ಗಿರಿ ಅವರು ತಲಾ 2.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಅನಿಶ್ ಗಿರಿ ಮತ್ತು ವಿಶ್ವ ಚಾಂಪಿಯನ್ಷಿಪ್ಸ್ ಚಾಲೆಂಜರ್ ಜಾವೊಖಿರ್ ಸಿಂದರೋವ್ (1.5 ಅಂಕ) ನಡುವಣ ಪಂದ್ಯ ಡ್ರಾ ಆಯಿತು.

ಅನಾರೋಗ್ಯದ ಕಾರಣ ಅಲಿರೇಜಾ ಫಿರೋಜ್ (0.5) ಅವರು ನಾಲ್ಕನೇ ಸುತ್ತಿನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನ (1.5) ಜೊತೆ ಪಂದ್ಯ ಆಡಲಿಲ್ಲ. ಈ ಪಂದ್ಯ ಮುಂದೂಡಲಾಯಿತು. ರುಮೇನಿಯಾದ ಡೇನಿಯಲ್ ಬೊಗ್ದಾನ್ ಡೀಕ್ ಮತ್ತು ಅಮೆರಿಕದ ವೆಸ್ಲಿ ಸೊ (2) ನಡುವಣ ಪಂದ್ಯ ಸಹ ಡ್ರಾ ಆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-51-795892327

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.