ಬುಕಾರೆಸ್ಟ್: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಇಲ್ಲಿ ನಡೆಯುತ್ತಿರುವ ಸೂಪರ್ ಚೆಸ್ ಕ್ಲಾಸಿಕ್ ಟೂರ್ನಿಯ ಮೂರನೇ ಸುತ್ತಿನಲ್ಲೇ ವಿನ್ಸೆಂಟ್ ಕೀಮರ್ ಅವರೊಂದಿಗೆ ಡ್ರಾ ಮಾಡಿಕೊಂಡರು.

ಪ್ರಜ್ಞಾನಂದ ಅವರು ಮೊದಲ ಸುತ್ತಿನಲ್ಲಿ ಫ್ರಾನ್ಸ್ನ ಅಲಿರೇಜಾ ಫಿರೋಝ್ ವಿರುದ್ಧ ಡ್ರಾ ಸಾಧಿಸಿದ್ದರೆ, ಎರಡನೇ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ ಅವರನ್ನು ಮಣಿಸಿದ್ದರು. ನಾಲ್ಕನೇ ಸುತ್ತಿನಲ್ಲಿ ನೆದರ್ಲೆಂಡ್ಸ್ನ ಜೋರ್ಡೆನ್ ವ್ಯಾನ್ ಫಾರೆಸ್ಟ್ ಅವರನ್ನು ಎದುರಿಸಲಿದ್ದಾರೆ. ಕಣದಲ್ಲಿರುವ 10 ಆಟಗಾರರ ಪೈಕಿ ಪ್ರಜ್ಞಾನಂದ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ.

ಭಾರತದ ಆಟಗಾರ ಒಟ್ಟು 2 ಅಂಕ ಗಳಿಸಿ ಇತರ ನಾಲ್ವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಫ್ರಾನ್ಸ್ನ ಮ್ಯಾಕ್ಸಿಮ್ ವೇಷಿಯರ್–ಲಗ್ರೇವ್, ಜರ್ಮನಿಯ ಕೀಮರ್, ನೆದರ್ಲೆಂಡ್ಸ್ನ ಅನೀಶ್ ಗಿರಿ ಮತ್ತು ಜೋರ್ಡೆನ್ ಅವರೂ ತಲಾ 2 ಅಂಕ ಗಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-51-779843205

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.