ಬುಕಾರೆಸ್ಟ್ (ರೊಮೇನಿಯಾ), (ಪಿಟಿಐ): ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಸೂಪರ್ ಚೆಸ್ ಕ್ಲಾಸಿಕ್ನಲ್ಲಿ ನಾಲ್ಕನೇ ಬಾರಿ ಡ್ರಾ ಮಾಡಿದರು. ಸೋಮವಾರ ರಾತ್ರಿ ನಡೆದ ಐದನೇ ಸುತ್ತಿನ ಪಂದ್ಯದಲ್ಲಿ ಅವರು ಅಮೆರಿಕದ ವೆಸ್ಲಿ ಸೊ ಜೊತೆ 45 ನಡೆಗಳಲ್ಲಿ ಡ್ರಾ ಮಾಡಿಕೊಂಡರು.

ಗ್ರ್ಯಾಂಡ್ ಚೆಸ್ ಟೂರ್ನ ಭಾಗವಾಗಿರುವ ಈ ಟೂರ್ನಿಯ ಐದನೇ ಸುತ್ತಿನಲ್ಲಿ ಐದೂ ಪಂದ್ಯಗಳು ಡ್ರಾ ಆದವು. ಜರ್ಮನಿಯ ವಿನ್ಸೆಂಟ್ ಕೀಮರ್ 3.5 ಪಾಯಿಂಟ್ಸ್ ಗಳಿಸಿದ್ದು, ಅರ್ಧ ಪಾಯಿಂಟ್ ಅಂತರದಿಂದ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಅವರು ಐದನೇ ಸುತ್ತಿನಲ್ಲಿ ನೆದರ್ಲೆಂಡ್ಸ್ನ ಅನಿಶ್ ಗಿರಿ (3) ಜೊತೆ 32 ನಡೆಗಳ ನಂತರ ಪಾಯಿಂಟ್ ಹಂಚಿಕೊಂಡರು.

ಪ್ರಜ್ಞಾನಂದ ಅವರು ಡಚ್ ಗ್ರ್ಯಾಂಡ್ಮಾಸ್ಟರ್ಗಳಾದ ಅನಿಶ್ ಗಿರಿ ಮತ್ತು ಜೋರ್ಡನ್ ವಾನ್ ಫೊರೀಸ್ಟ್ ಅವರೊಂದಿಗೆ ತಲಾ ಮೂರು ಪಾಯಿಂಟ್ಸ್ ಕಲೆಹಾಕಿದ್ದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಮತ್ತು ವೆಸ್ಲಿ ಸೊ ಅವರು ತಲಾ ಎರಡೂವರೆ ಪಾಯಿಂಟ್ಸ್ ಶೇಖರಿಸಿದ್ದಾರೆ. ಅಮೆರಿಕದ ಫ್ಯಾಬಿಯಾನೊ ಕರುವಾನ ಮತ್ತು ವಿಶ್ವ ಚಾಂಪಿಯನ್ಷಿಪ್ ಚಾಲೆಂಜರ್ ಆಗಿರುವ ಜಾವೊಖಿರ್ ಸಿಂದರೋವ್ ಅವರು ತಲಾ ಎರಡು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.

ಆತಿಥೇಯ ರೊಮೇನಿಯಾದ ಬೊಗ್ದಾನ್–ಡೇನಿಯಲ್ ಡೀಕ್ (1.5) ಒಂಬತ್ತನೇ ಮತ್ತು ಫ್ರಾನ್ಸ್ ಅಲಿರೇಜಾ ಫಿರೋಝ್ (1 ಪಾಯಿಂಟ್) ಕ್ರಮವಾಗಿ 9 ಮತ್ತು ಕೊನೆಯ ಸ್ಥಾನದಲ್ಲಿದ್ದಾರೆ.

ಅಲಿರೇಝಾ ಅವರು ಮೂರನೇ ಸುತ್ತಿನ ನಂತರ ಪಾದ ಉಳುಕಿಕೊಂಡಿದ್ದ ಕಾರಣ ನಾಲ್ಕನೇ ಸುತ್ತಿನ ಪಂದ್ಯ ಆಡಿರ ಲಿಲ್ಲ. ಆಯೋಜಕರಿಂದ ಒಪ್ಪಿಗೆ ದೊರೆತ ಬಳಿಕ ಅವರು ಹೋಟೆಲ್ ಕೊಠಡಿಯಿಂದ ಉಜ್ಬೇಕಿಸ್ತಾನದ ಸಿಂದರೋವ್ ಜೊತೆ ಆಡಿದರು. ಆಟ ಡ್ರಾ ಆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-1479218957

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.