ಬುಕಾರೆಸ್ಟ್ (ರೊಮೇನಿಯಾ): ಜರ್ಮನಿಯ ವಿನ್ಸೆಂಟ್ ಕೀಮರ್ (6 ಅಂಕ) ಅವರು ಶನಿವಾರ ಮುಕ್ತಾಯವಾದ ಸೂಪರ್ ಚೆಸ್ ಕ್ಲಾಸಿಕ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಅವರು ಅಂತಿಮ ಹಾಗೂ ಒಂಬತ್ತನೇ ಸುತ್ತಿನಲ್ಲಿ ಡಚ್ ಗ್ರ್ಯಾಂಡ್ಮಾಸ್ಟರ್ ಜೋರ್ಡನ್ ವಾನ್ ಫೋರೀಸ್ಟ್ ಅವರನ್ನು ಸೋಲಿಸಿದರು.

ಅಮೆರಿಕದ ಫ್ಯಾಬಿಯಾನೊ ಕರುವಾನ ಹಾಗೂ ಕೀಮರ್ ಅವರು ಎಂಟನೇ ಸುತ್ತು ಮುಕ್ತಾಯದ ವೇಳೆಗೆ ತಲಾ 5 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದರು. ಕರುವಾನ ಅವರು ಅಂತಿಮ ಸುತ್ತಿನಲ್ಲಿ ಫ್ರಾನ್ಸ್ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಜೊತೆಗೆ ಡ್ರಾ ಮಾಡಿಕೊಂಡರು. ಹೀಗಾಗಿ ಅವರು ಎರಡನೇ ಸ್ಥಾನಕ್ಕೆ (5.5 ಅಂಕ) ಸರಿದರು. ಜಾವೊಖಿರ್ ಸಿಂದರೋವ್ (ಉಜ್ಬೇಕಿಸ್ತಾನ) 5 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದರು.

ಭಾರತದ ಆರ್.ಪ್ರಜ್ಞಾನಂದ ಅವರು ಅನೀಶ್ ಗಿರಿ ಜೊತೆಗೆ ಡ್ರಾ ಮಾಡಿಕೊಂಡರು. ಪ್ರಜ್ಞಾನಂದ, ಅಮೆರಿಕದ ವೆಸ್ಲಿ ಸೊ, ಫೋರೀಸ್ಟ್, ಅನೀಶ್ ಹಾಗೂ ಲಗ್ರಾವ್ (ತಲಾ 4.5) ಜಂಟಿಯಾಗಿ ನಾಲ್ಕನೇ ಸ್ಥಾನ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-43-1321920340

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.