ವಾರ್ಸಾ (ಪೋಲೆಂಡ್), (ಪಿಟಿಐ): ಹಾಲಿ ವಿಶ್ವ ಚಾಂಪಿ ಯನ್ ಡಿ.ಗುಕೇಶ್ ಅವರು ಸೂಪರ್ ರ್ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯ ಐದನೇ ಸುತ್ತಿನಲ್ಲಿ ಬುಧವಾರ ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ ಅವರನ್ನು 52 ನಡೆಗಳಲ್ಲಿ ಸೊಲಿಸಿದರು.

ಸಿಂದರೋವ್ ಅವರು ಮುಂಬರುವ ವಿಶ್ವ ಚಾಂಪಿಯನ್ಷಿಪ್ನಲ್ಲಿ ಗುಕೇಶ್ ಅವರಿಗೆ ಚಾಲೆಂಜರ್ ಆಗಿದ್ದಾರೆ. ಹೀಗಾಗಿ ಈ ವಿಜಯ ಗುಕೇಶ್ ಅವರಿಗೆ ವಿಶ್ವಾಸದ ದೃಷ್ಟಿಯಿಂದ ಮಹತ್ವದ್ದು. ಪೋಲೆಂಡ್ ಟೂರ್ನಿಯು ಗ್ರ್ಯಾಂಡ್ ಚೆಸ್ ಟೂರ್ನ ಭಾಗವಾಗಿದೆ. ಫಾರ್ಮ್ ಉತ್ತಮವಾಗಿಲ್ಲದ ಕಾರಣ ಮತ್ತು ವಿಶ್ವ ಚಾಂಪಿಯನ್ಷಿಪ್ಗೆ ಸಿದ್ಧತೆ ನಡೆಸಲು ಗುಕೇಶ್, ಗ್ರ್ಯಾಂಡ್ ಚೆಸ್ ಟೂರ್ನ ಮೊದಲ ಕೆಲವು ಟೂರ್ನಿಗಳಲ್ಲಿ ಆಡಿರಲಿಲ್ಲ. ಈ ಸುತ್ತಿನಲ್ಲಿ ಆಡುವ ಮೊದಲು ಇಬ್ಬರೂ, ನಾಲ್ಕನೇ ಸುತ್ತಿನ ಪಂದ್ಯಗಳನ್ನು ಸೋತಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-216027476

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.