ಓಸ್ಲೊ (ಪಿಟಿಐ): 20ನೇ ವರ್ಷಕ್ಕೆ ಕಾಲಿಟ್ಟ ಮರುದಿನವೇ ವಿಶ್ವ ಚಾಂಪಿಯನ್ ಡಿ.ಗುಕೇಶ್ ತಮ್ಮ ಲಯಕ್ಕೆ ಮರಳುವ ರೀತಿಯಲ್ಲಿ ಆಡಿದರು. ನಾರ್ವೆ ಚೆಸ್ ಟೂರ್ನಿಯ ಐದನೇ ಸುತ್ತಿನಲ್ಲಿ ಅವರು ಸ್ವದೇಶದ ಆರ್. ಪ್ರಜ್ಞಾನಂದ ಅವರನ್ನು ಸೋಲಿಸಿ ಪೂರ್ಣ ಮೂರು ಪಾಯಿಂಟ್ ಪಡೆದರು.

ಈವರೆಗೆ ಪರದಾಡಿದ್ದ ಗುಕೇಶ್ ಮುಖದಲ್ಲಿ ಶನಿವಾರ ಮಂದಹಾಸ ಅರಳಿತು. ಅವರು ಒಟ್ಟು 6.5 ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನ ದಲ್ಲಿದ್ದಾರೆ. ಪ್ರಜ್ಞಾನಂದ (6) ನಂತರದ ಸ್ಥಾನದಲ್ಲಿದ್ದಾರೆ.

ಹಾಲಿ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರ ಬೇಗುದಿ ಮುಂದುರಿಯಿತು. ಅವರು ಅಮೆರಿಕದ ವೆಸ್ಲಿ ಸೊ ಅವರಿಗೆ ಸೋತರು. ಸೊ ಒಟ್ಟು 8.5 ಪಾಯಿಂಟ್ಸ್ ಕಲೆಹಾಕಿ ಎರಡನೇ ಸ್ಥಾನಕ್ಕೇರಿದರು.

ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲ್ಸನ್ ತವರಿನ ಈ ಟೂರ್ನಿಯಲ್ಲಿ 4.5 ಪಾಯಿಂಟ್ಗಳೊಡನೆ ಕೊನೆಯ ಸ್ಥಾನದಲ್ಲಿದ್ದಾರೆ.

ಫ್ರಾನ್ಸ್ನ ಅಲಿರೇಝಾ ಫಿರೋಝ್ಜಾ (10) ಅವರು ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು ಐದನೇ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ (5) ಅವರನ್ನು ಮಣಿಸಿದರು.

ಅಗ್ರಸ್ಥಾನಕ್ಕೇರಿದ ದಿವ್ಯಾ: ಮಹಿಳೆಯರ ವಿಭಾಗದಲ್ಲಿ ಭಾರತದ ದಿವ್ಯಾ ದೇಶಮುಖ್ (8.5), ಐದನೇ ಸುತ್ತಿನಲ್ಲಿ ಚೀನಾದ ಝು ಜಿನೆರ್ (5) ಅವರನ್ನು 84 ನಡೆಗಳಲ್ಲಿ ಸೋಲಿಸಿ ಅಗ್ರಸ್ಥಾನಕ್ಕೇರಿದರು. ಕೋನೇರು ಹಂಪಿ (4.5), ಆರ್ಮ್ಗೆಡನ್ನಲ್ಲಿ ವಿಶ್ವ ಚಾಂಪಿಯನ್ ಜು ವೆನ್ಜುನ್ (ಚೀನಾ, 5) ಅವರನ್ನು ಸೋಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-602396746

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.