ಪ್ರಾಗ್ (ಝೆಕ್ ರಿಪಬ್ಲಿಕ್): ಭಾರತದ ಗ್ರ್ಯಾಂಡ್ಮಾಸ್ಟರ್ ಅರವಿಂದ ಚಿದಂಬರಮ್ ಅವರು ಪ್ರಾಗ್ ಅಂತರರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ನ ಎಂಟನೇ ಸುತ್ತಿನಲ್ಲಿ ನೆದರ್ಲೆಂಡ್ಸ್ನ ಜೋರ್ಡನ್ ವಾನ್ ಫೊರೀಸ್ಟ್ ಅವರನ್ನು ಸೋಲಿಸಿದರು. ಆದರೆ ವಿಶ್ವ ಚಾಂಪಿಯನ್ ಗುಕೇಶ್ ಟೂರ್ನಿಯಲ್ಲಿ ಐದನೇ ಸಲ ಡ್ರಾ ಮಾಡಿಕೊಂಡರು.

ಎಂಟನೇ ಸುತ್ತಿನಲ್ಲಿ ಗುಕೇಶ್ (2.5 ಅಂಕ), ಜರ್ಮನಿಯ ವಿನ್ಸೆಂಟ್ ಕೀಮರ್ (4) ಅವರ ಜೊತೆ ಪಾಯಿಂಟ್ ಹಂಚಿಕೊಂಡರು. ಭಾರತದ ಆಟಗಾರ ಇದುವರೆಗೆ ಒಂದೂ ಗೆಲುವು ಒಲಿದಿಲ್ಲ. ಶನಿವಾರ ಕೊನೆಯ ಸುತ್ತಿನ ಪಂದ್ಯಗಳು ನಡೆಯಲಿದೆ.

ಏಳನೇ ಸುತ್ತಿನವರೆಗೆ ಮುನ್ನಡೆಯಲ್ಲಿದ್ದ ವಾನ್ ಫೊರೀಸ್ಟ್ (5) ಅವರು ಅರವಿಂದ್ (4) ಅವರಿಗೆ ಸೋತ ಪರಿಣಾಮ ಮೊದಲ ಸಲ ಅಗ್ರಸ್ಥಾನ ಕಳೆದುಕೊಂಡರು. ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೋವ್ (5.5) ಏಕಾಂಗಿಯಾಗಿ ಅಗ್ರಸ್ಥಾನಕ್ಕೇರಿದರು. ಅವರು, ಆತಿಥೇಯ ಝೆಕ್ ರಿಪಬ್ಲಿಕ್ನ ಡೇವಿಡ್ ನವಾರ (4.5) ಅವರನ್ನು ಸೋಲಿಸಿದರು.

ಫೆಬ್ರುವರಿಯಲ್ಲಿ ಟಾಟಾ ಸ್ಟೀಲ್ ಮಾಸ್ಟರ್ಸ್ ಗೆದ್ದ ನಂತರ ಅಬ್ದುಸತ್ತಾರೋವ್ ಈಗ ಎರಡನೇ ‘ಸೂಪರ್ ಇವೆಂಟ್’ನಲ್ಲಿ ಪ್ರಶಸ್ತಿಗೆ ಸನಿಹದಲ್ಲಿದ್ದಾರೆ. ವಾನ್ ಫೊರೀಸ್ಟ್ (5) ಮತ್ತು ನವಾರ (4.5) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಚಾಲೆಂಜರ್ಸ್ ವಿಭಾಗದಲ್ಲಿ ಝೆಕ್ ರಿಪಬ್ಲಿಕ್ನ ಫೆನೆಕ್ ವಾಂಕ್ಲಾವ್ (5.5) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು ಎಂಟನೇ ಸುತ್ತಿನಲ್ಲಿ ಭಾರತದ ಸೂರ್ಯಶೇಖರ ಗಂಗೂಲಿ (3) ಜೊತೆ ಡ್ರಾ ಮಾಡಿಕೊಂಡರು.

ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್ (4) ಅವರು ಆತಿಥೇಯ ದೇಶದ ನೆಮೆಕ್ ಜಾಕಿಮ್ (4.5) ಜೊತೆ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.