ಕೋಲಾರ: ಬೆಂಗಳೂರಿನ ಕ್ರೈಸ್ಟ್ ಕಾಲೇಜು ತಂಡದವರು ಇಲ್ಲಿ ನಡೆಯು ತ್ತಿರುವ ಅಖಿಲ ಭಾರತ ಅಂತರ ಕಾಲೇಜು ಆಹ್ವಾನಿತ ಬ್ಯಾಸ್ಕೆಟ್ಬಾಲ್ ‘ಚಿನ್ನದ ನಾಡು ಕಪ್- 2026’ ಟೂರ್ನಿಯ ಪಂದ್ಯದಲ್ಲಿ ಜಯ ಗಳಿಸಿದರು.

ನಗರದ ಮಿನಿ ಕ್ರೀಡಾಂಗಣದಲ್ಲಿಚಿನ್ನದ ನಾಡು ಬ್ಯಾಸ್ಕೆಟ್ಬಾಲ್ ಕ್ಲಬ್ ಆಶ್ರಯದಲ್ಲಿ ನಡೆದ ಪಂದ್ಯದಲ್ಲಿ ಈ ತಂಡದವರು 65–60 ಪಾಯಿಂಟ್ ಗಳಿಂದ ಕೇರಳದ ಸೇಂಟ್ ಅಲ್ಬರ್ಟ್ಸ್ ಕಾಲೇಜು ತಂಡವನ್ನು ಮಣಿಸಿದರು.

ವಿರಾಮದ ವೇಳೆ ತಲಾ 27 ಪಾಯಿಂಟ್ಗಳಿಂದ ಸಮಬಲ ಸಾಧಿಸಿದ್ದರು. ಆದರೆ, ವಿರಾಮದ ನಂತರ ಪಂದ್ಯ ಕ್ಷಣ ಕ್ಷಣಕ್ಕೆ ತಿರುವು ಪಡೆಯುತ್ತಾ ಸಾಗಿತು. ಉಭಯ ತಂಡಗಳ ಆಟಗಾರರು ವೇಗಕ್ಕೆ ಒತ್ತು ನೀಡಿದರು. ಅಂತಿಮವಾಗಿ ಉತ್ತಮ ಕೌಶಲ ಆಟವಾಡಿದ ಕ್ರೈಸ್ ಕಾಲೇಜು ತಂಡದವರು 5 ಪಾಯಿಂಟ್ಗಳಿಂದ ಜಯಭೇರಿ ಬಾರಿಸಿದರು.

ಮಹಿಳೆಯರ ವಿಭಾಗದ ಮತ್ತೊಂದು ರೋಚಕ ಪಂದ್ಯದಲ್ಲಿ ಜೈನ್ ಕಾಲೇಜು ತಂಡ ಕೇವಲ 1 ಪಾಯಿಂಟ್ನಿಂದ ಕೇರಳದ ಪ್ರಾವಿಡೆನ್ಸ್ ಕಾಲೇಜು ತಂಡವನ್ನು ಸೋಲಿಸಿದರು.

ವಿರಾಮದ ವೇಳೆಗೆ ಪಂದ್ಯ 31–31 ಪಾಯಿಂಟ್ಗಳಿಂದ ಸಮಬಲವಾಗಿತ್ತು. ನಂತರ ಉಭಯ ತಂಡದ ಆಟಗಾರರು ಅತ್ಯುತ್ತಮವಾಗಿ ಆಟವಾಡಿ ಪಂದ್ಯ ಗೆಲ್ಲಲು ಹರಸಾಹಸ ಪಟ್ಟರು. ಕೊನೆಯಲ್ಲಿ ಜೈನ್ ತಂಡ 61–60 ಪಾಯಿಂಟ್ಗಳಿಂದ ಪ್ರಾವಿಡೆನ್ಸ್ ಎದುರು ಗೆಲುವು ಸಾಧಿಸಿತು. ಜೈನ್ ಕಾಲೇಜು ತಂಡದ ಆಧ್ಯಾ (23 ಪಾಯಿಂಟ್) ಹಾಗೂ ಪ್ರಾವಿಡೆನ್ಸ್ ತಂಡದ ವರ್ಷಾ (25 ಪಾಯಿಂಟ್) ಮಿಂಚಿದರು.

ಈ ಟೂರ್ನಿಗೆ ಬೆಂಗಳೂರಿನ ಪೊಲೀಸ್ ತರಬೇತಿ ಡಿಐಜಿಪಿ ಡಿ.ದೇವರಾಜ್ ಚಾಲನೆ ನೀಡಿದ್ದರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಭೇಟಿ ನೀಡಿ ಆಟಗಾರರನ್ನು ಪರಿಚಯಿಸಿಕೊಂಡರು.

ಸುಮಾರು ₹4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಿಂಥೆಟಿಕ್ ಕೋರ್ಟ್ ನಿರ್ಮಾಣವಾದ ಬಳಿಕ ನಡೆಯುತ್ತಿರುವ ಪ್ರಥಮ ಟೂರ್ನಿ ಇದಾಗಿದೆ. ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟು 10 ವಿಶ್ವ ವಿದ್ಯಾಲಯದ ಕಾಲೇಜು ತಂಡಗಳು ಭಾಗವಹಿಸಿವೆ. ಈ ಪೈಕಿ 6 ಪುರುಷರ ಹಾಗೂ 4 ಮಹಿಳಾ ತಂಡಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.