ಕರಾಚಿ: ಆಗಸ್ಟ್ನಲ್ಲಿ ನಡೆಯಲಿರುವ ಎಫ್ಐಎಚ್ ಪುರುಷರ ವಿಶ್ವಕಪ್ಗೆ ಮುನ್ನ ಪಾಕಿಸ್ತಾನ ಹಾಕಿ ಫೆಡರೇಷನ್ ಆಸ್ಟ್ರೇಲಿಯಾದ ಕಾಲಿನ್ ಬ್ಯಾಚ್ ಅವರನ್ನು ರಾಷ್ಟ್ರೀಯ ತಂಡದ ಹೊಸ ಮುಖ್ಯ ತರಬೇತುದಾರರಾಗಿ ನೇಮಿಸಿದೆ.

ಖ್ವಾಜಾ ಜುನೇದ್ ಅವರಿಂದ ತೆರವಾದ ಸ್ಥಾನಕ್ಕೆ ಕಾಲಿನ್ ನೇಮಕಗೊಂಡಿದ್ದಾರೆ. ಜುನೇದ್ ಅವರ ಮಾರ್ಗದರ್ಶನದಲ್ಲಿ ತಂಡವು ಈಚೆಗೆ ಈಜಿಪ್ಟ್ನಲ್ಲಿ ನಡೆದ ಎಫ್ಐಎಚ್ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಫೈನಲ್ ತಲುಪಿತ್ತು. ಈ ಮೂಲಕ ಎಂಟು ವರ್ಷಗಳ ನಂತರ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿತ್ತು.

1979 ಮತ್ತು 1990ರ ನಡುವೆ ಆಸ್ಟ್ರೇಲಿಯಾ ತಂಡಕ್ಕೆ 175 ಪಂದ್ಯಗಳನ್ನು ಆಡಿರುವ ಕಾಲಿನ್ ಅವರು 100 ಗೋಲುಗಳನ್ನು ಗಳಿಸಿದ ದಾಖಲೆ ಹೊಂದಿದ್ದಾರೆ. ಬೆಲ್ಜಿಯಂ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಕೋಚ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಈ ತಿಂಗಳ ಕೊನೆಯಲ್ಲಿ ಪಾಕಿಸ್ತಾನ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಎಫ್ಐಎಚ್ ಪ್ರೊ ನೇಷನ್ಸ್ ಹಾಕಿ ಲೀಗ್ನ ಮೂರನೇ ಲೆಗ್ಗೆ ಮತ್ತು ವಿಶ್ವಕಪ್ ಟೂರ್ನಿಗೆ ತಂಡವನ್ನು ಸಜ್ಜುಗೊಳಿಸಲಿದ್ದಾರೆ.

ಕಳೆದ ತಿಂಗಳು ನಡೆದ ಎಫ್ಐಎಚ್ ಪ್ರೊ ನೇಷನ್ಸ್ ಕಪ್ನ ಆಸ್ಟ್ರೇಲಿಯಾ ಲೆಗ್ ನಂತರ ಪಾಕಿಸ್ತಾನ ಹಾಕಿಯಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಅಲ್ಲಿ ಆಟಗಾರರು ವಸತಿ ಮತ್ತು ಇತರ ಪ್ರಯಾಣಕ್ಕೆ ಸಂಬಂಧಿಸಿ ಸಮಸ್ಯೆಗಳನ್ನು ಎದುರಿಸಿದ್ದರು. ಆ ದೂರಿನ ಬಳಿಕ ಪ್ರಧಾನಿ ಶಹಬಾಜ್ ಷರೀಫ್ ಅವರು ಹಾಕಿ ವ್ಯವಹಾರಗಳನ್ನು ನೋಡಿಕೊಳ್ಳಲು ಮಧ್ಯಂತರ ಪಾಕಿಸ್ತಾನ ಹಾಕಿ ಫೆಡರೇಷನ್ ವ್ಯವಸ್ಥೆ ಜಾರಿಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.