ಬೆಂಗಳೂರು: ನಗರದ ಉದಯೋನ್ಮುಖ ಆಟಗಾರ್ತಿ ನಕ್ಷತ್ರ ಗುಮುದವೆಲ್ಲಿ, ಶ್ರೀಲಂಕಾದ ಕಲುತಾರದಲ್ಲಿ ನಡೆದ ಕಾಮನ್ವೆಲ್ತ್ ಯುವ ಚಾಂಪಿಯನ್ಷಿಪ್ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಅಮೋಘ ಸಾಧನೆ ಪ್ರದರ್ಶಿಸಿದ್ದಾಳೆ.

ಹತ್ತು ವರ್ಷದೊಳಗಿನವರ ವಿಭಾಗದಲ್ಲಿ ಆಡಿದ ನಕ್ಷತ್ರಾ, ಕ್ಲಾಸಿಕಲ್ ವಿಭಾಗದಲ್ಲಿ 9 ಸುತ್ತುಗಳಿಂದ 8.5 ಪಾಯಿಂಟ್ಸ್ ಸಂಗ್ರಹಿಸಿದರೆ, ರ್ಯಾಪಿಡ್ ವಿಭಾಗದಲ್ಲಿ 7 ಸುತ್ತುಗಳಿಂದ 6.5 ಪಾಯಿಂಟ್ಸ್ ಹಾಗೂ ಬ್ಲಿಟ್ಝ್ನಲ್ಲಿ 7ರಲ್ಲಿ 7 ಅಂಕ ಪಡೆದು ಅಜೇಯರಾಗುಳಿದಳು.

ನಗರದ ವೇಲಮ್ಮಾಳ್ ಶಾಲೆಯ ವಿದ್ಯಾರ್ಥಿನಿಯಾಗಿರುವ ನಕ್ಷತ್ರಾ, ರಾಷ್ಟ್ರೀಯ, ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

14 ವರ್ಷದೊಳಗಿನವರ ವಿಭಾಗದಲ್ಲಿ ನಗರದ ಇನ್ನೊಬ್ಬ ಆಟಗಾರ್ತಿ ದಿವ್ಯಶ್ರೀ ಕೊಲ್ಲಿಪಾರ, ರ್ಯಾಪಿಡ್ ವಿಭಾಗದಲ್ಲಿ ಬೆಳ್ಳಿ ಮತ್ತು ಕ್ಲಾಸಿಕಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಳು. ಬ್ಲಿಟ್ಝ್ನಲ್ಲಿ ನಾಲ್ಕನೇ ಸ್ಥಾನಕ್ಕೆ ಸರಿದು ಪದಕ ಸ್ವಲ್ಪದರಲ್ಲೇ ಕೈತಪ್ಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.